ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು, ಇದರ 15ನೇ ವಾರ್ಷಿಕ ಮಹಾಸಭೆ.

  ಎಲ್ಲರ ಸಹಕಾರದಿಂದ ಅಕ್ಷಯಧಾರ ಪ್ರಗತಿ ಸಾಧಿಸಿದೆ -  ಲವ. ಎನ್. ಕರ್ಕೇರ.

ಅಕ್ಷಯ ಧಾರ  ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ) ಕಾಪು.      ಇದರ  15 ನೇ  ವಾರ್ಷಿಕ ಮಹಾ ಸಭೆಯು  ತಾ-21-09-23ರ ಗುರುವಾರ  ಕಾಪು ಪೇಟೆಯಲ್ಲಿರುವ "ಭಾಸ್ಕರ ಸೌದ" ದ  ಸಿ.ಎ. ಬ್ಯಾಂಕ್ ನ  ಮೇಲಿನ  ಮಹಡಿಯಲ್ಲಿ  ನಡೆಯಿತು. ಸ್ವಾಗತ  ಬಯಸಿದ  ಬಳಿಕ  ಕಾರ್ಯದರ್ಶಿ  ಅಮಿತಾ ದೇವದಾಸ್ ಅವರು ಗತ ವರ್ಷದ  ವರದಿಯನ್ನು  ಓದಿದರು.  ನಂತರ ಕಳೆದ ವರ್ಷದ ಲೆಕ್ಕಪತ್ರ ವನ್ನು ಮಂಡಿಸಲಾಯಿತು. 


 ಬಳಿಕ ಕಾರ್ಯ ಸೂಚಿ ಯಂತೆ   ಅದ್ಯಕ್ಷರು  ಮಹಾ ಸಭೆಯ  ಕಾರ್ಯ ಕಲಾಪ ವನ್ನು ಮುಂದುವರಿಸಿದರು. 
ಸದಸ್ಯರಾದ ಸೀತಾ ಲಕ್ಷ್ಮಿ ರಾವ್, ಸುಂದರ್, ಸೀತಾರಾಮ ಸಾಲ್ಯಾನ್, ವಿಠಲದಾಸ್ ರಾವ್,ಶ್ರೀಪತಿ ಉಡುಪ,ಚಂದ್ರ ಶೇಖರ್ ಕುಮಾರ್, ಸಲಹೆ-ಸೂಚನೆ ನೀಡಿದರು. 


 ಅದ್ಯಕ್ಷ ಲವ ಕರ್ಕೆರ ಅವರು ಮಾತಾನಾಡಿ,  ಪ್ರಸ್ತುತ  ವರ್ಷ ದಲ್ಲಿ ನಮ್ಮಿ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದ್ದು  , ಶೇರು ದಾರರು , ಠೇವಣೆದಾರರು, ಖಾತೆ ದಾರರು  , ಪಿಗ್ಮಿ ದಾರರು ಹೀಗೆ  ಎಲ್ಲರ ಸಹಕಾರ - ಸಹಾಯ ಮರೆಯಲಾರದು ಎಂದು  ತಿಳಿಸಿದರು.  



ಮಹಾ ಸಭೆಯಲ್ಲಿ  ಬ್ಯಾಂಕ್ ನ ಉಪಾದ್ಯಕ್ಷ  ಮೊಹಮ್ಮದ್  ಇರ್ಫಾನ್ ನಿರ್ದೇಶಕರಾದ ವಿಜಯಶೆಟ್ಟಿ, ನಂದ ಕಿಶೋರ, ಮಹಮದ್ ಸಾಧಿಕ್, ಯೋಗೇಶ್ ಪೂಜಾರಿ, ದೀಪಾಲತಾ, ವಿಮಲ ದೇವಾಡಿಗ  ಸಹಿತ  ಆಡಳಿತ ಮಂಡಳಿ ಯ ಸದಸ್ಯರು  ಉಪಸ್ಥಿತರಿದ್ದರು.  ಕಾರ್ಯದರ್ಶಿ ಅಮಿತ  ದೇವದಾಸ್  ಅವರು ಮಹಾಸಭೆ ಯು  ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ  ನಡೆಯಲು  ಕಾರಣೀ ಕರ್ತ ರಾದ  ಸರ್ವರಿಗು  ಆಭಾರ ಮನ್ನಿಸಿದರು.


















No comments

Powered by Blogger.