ಕುಲಾಲ ಸುಧಾರಕ ಸಂಘ [ರಿ] ಪುಣೆ –45ನೇ ಮಹಾಸಭೆ ,ಸ್ನೇಹ ಸಮ್ಮಿಲನ
ಸಮಾಜ ಭಾಂದವರ ಮತ್ತು ಸಂಘಟನೆಯ ಸಂಪರ್ಕ ನಿತ್ಯ ನಿರಂತವಾಗಿರಲಿ-ಪ್ರವೀಣ್ ಶೆಟ್ಟಿ ಪುತ್ತೂರು
ವರದಿ : ಹರೀಶ್ ಮೂಡಬಿದ್ರಿ
ಪುಣೆ :ಯಾವುದೇ ಒಂದು ಸಂಘ ಅಥವಾ ಸಂಘಟನೆ ಬೆಳೆಯಲು ಒಗ್ಗಟ್ಟು ಮುಖ್ಯ , ಸಮಾನ ಮನಸ್ಕ ಸಮಾಜ ಭಾಂದವರ ಸಹಕಾರದೊಂದಿಗೆ ದೃಡ ಸಂಕಲ್ಪದೊಂದಿಗೆ ಸಮಾಜವನ್ನು ಕಟ್ಟುವ ದ್ಯೇಯ ನಮ್ಮಲ್ಲಿರಬೇಕು , ಸಂಘ ಬೆಳೆಯಲು ನಮ್ಮ ಸಂಘ ನಮ್ಮ ಪ್ರತಿಷ್ಟೆ ಎಂಬ ಹೆಗ್ಗಳಿಕೆ ಸಮಾಜ ಭಾಂದವರೆಲ್ಲರು ಹೊಂದಿರಬೇಕು ,ಇದರಿಂದ ಎಲ್ಲಾ ಸಮಾಜ ಭಾಂದವರ ಕೈ ಗೂಡಿದಾಗ ಸಂಘ ಹೆಮ್ಮರವಾಗಿ ಬೆಳೆಯಲು ಸಾದ್ಯ . ಇಂದು ನಾವು ಕಾಣುವ ಇತರೆ ಜಾತಿ ಸಂಘಟನೆಯಂತೆ ಬಲಯುತವಾದ ಸಂಸ್ಥೆಯನ್ನು ಕಟ್ಟುವಂತಹ ಛಲ ನಿಮ್ಮ ಕುಲಾಲ ಸಮಾಜದಲ್ಲಿಯೂ ಇದೆ , ಇಂದಿನ ದಿನಗಳಲ್ಲಿ ಸಮಾಜದ ವ್ಯಕ್ತಿಗಳು ಉಧ್ಯಮ ವ್ಯಾಪಾರದಲ್ಲಿ ತೊಡಗಿದವರಿದ್ದಾರೆ ಇವರೆಲ್ಲಾ ಕೂಡಿ ಸಂಘವನ್ನು ಬೆಳೆಸುವ ಕಾರ್ಯದಲ್ಲಿ ಬಾಗಿಗಲಾಗಬೇಕು , ನಮ್ಮ ಹಿಂದೂ ಧರ್ಮದ ಸಂಸ್ಕಾರ, ಕಲೆ ,ಸಂಸ್ಕ್ರತಿಯನ್ನು ಮೀರದೆ ಸನ್ಮಾರ್ಗದಲ್ಲಿ ನಡೆದರೆ ಎಲ್ಲಾವೂ ಸಾದ್ಯ . ಸಮಾಜದ ಹಿರಿಯರು ಸ್ಥಾಪಿಸಿದ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ,ಮಹಿಳಾ ಶಕ್ತಿ , ಕುಲಾಲ ಯುವ ಜನತೆ ಸಂಘದ ಜೊತೆ ಸೇರಿ ಅಭಿವೃದ್ದಿಯ ಪಥದಲ್ಲಿ ಸಾಗುವಂತೆ ಮಾಡಬೇಕು ಎಂದು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ನುಡಿದರು
ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಸೆಪ್ಟೆಂಬರ್ 17 ರವಿವಾರ ದಂದು ,ಪುಣೆಯ ಕೆತ್ಕರ್ ರೋಡ್ ನಲ್ಲಿರುವ ಡಾ1ಶ್ಯಾಮ್ ರಾವ್ ಕಲ್ಮಾಡಿ ಹೈಸ್ಕೂಲ್ ನ ಸಭಾ ಭವನದಲ್ಲಿ ಜರಗಿತು . ಈ ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪ್ರವೀಣ್ ಶೆಟ್ಟಿ ಯವರು ಮಾತನಾಡಿ ಇಂದಿನ ಸಮಾಜದಲ್ಲಿ ಎಲ್ಲರೂ ವಿದ್ಯಾವಂತರೆ ,ಆದರೆ ವಿದ್ಯೆಯ ಜೊತೆಯಲ್ಲಿ ವಿನಯತೆ ಮತ್ತು ಸೌಜನ್ಯತೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ , ಸಂಘದ ಜೊತೆ ಸಮಾಜ ಭಾಂದವರು ಕಲೆ ಸಂಸ್ಕ್ರತಿ,ಕ್ರೀಡೆ ,ಶೈಕ್ಷಣಿಕ ಮಾದರಿಯ ಮತ್ತಷ್ಟು ಕಾರ್ಯಕ್ರಮಗಳನ್ನು ಮಾಡುವ ಹುಮ್ಮಸ್ಸು ಬಂದರೆ ಇನ್ನು ಹೆಚ್ಚಿನ ಭಾಂದವರು ಸಂಘದ ಜೊತೆ ಸೇರಿಕೊಳ್ಳುತ್ತಾರೆ ,ನಿರಂತರವಾಗಿ ಸಮಾಜದ ಪ್ರತಿಯೊಬ್ಬರೂ ಸಂಘದ ಜೊತೆ ಸಂಪರ್ಕ ಹೊಂದಿರಬೇಕು ,ಇದರಿಂದ ಸಂಘಟನೆ ನಿತ್ಯ ಸುಂದರವಾಗಿರುತ್ತದೆ ಎಂದರು.
ಪುಣೆ ಕುಲಾಲ ಸಂಘದ ಅದ್ಯಕ್ಷರಾದ ಶ್ರೀ ಹರೀಶ್ ಕುಲಾಲ್ ರವರ ಅದ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪುಣೆ ಕುಲಾಲ ಸಂಘದ, ಮುಖ್ಯ ಅತಿಥಿಗಳಾಗಿ ಮಂಗಳೂರು ಕುಲಾಲ ಭವನದ ಧನ ಸಂಗ್ರಹ ಸಮಿತಿಯ ಉಪಾಧ್ಯಕ್ಷ ಶ್ರೀ ಸುನಿಲ್ ಕುಮಾರ್ ಸಾಲಿಯಾನ್ ,ಪುಣೆ ಬಂಟರ ಸಂಘದ ಉಪಾಧ್ಯಕ್ಷ ,ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಆರ್ಯಭಟ ಪ್ರಶಸ್ತಿ ಪುರಸ್ಕ್ರತ ಪ್ರವೀಣ್ ಶೆಟ್ಟಿ ಪುತ್ತೂರು ಆಗಮಿಸಲಿದ್ದಾರೆ.ಗೌರವ ಅತಿಥಿಗಳಾಗಿ ಪುಣೆಯ ಉದ್ಯಮಿ ದಯಾನಂದ ಸಿ ಮೂಲ್ಯ ,ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ಶ್ರೀ ರಾಘು ಎ .ಮೂಲ್ಯ ,ಬಂಟ್ವಾಳ ನಗರ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಜಯರಾಜ್ ಎಸ್ .ಬಂಗೇರ ,ಕುಲಾಲ ಸಂಘ ಮುಂಬಯಿ ಪ್ರಾಯೋಜಿತ ಜ್ಯೋತಿ ಕೋ ಅಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್ ,ಮುಂಬಯಿ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಕುಲಾಲ .ಸಂಘದ ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ ,ಪ್ರ .ಕಾರ್ಯದರ್ಶಿ ನವೀನ್ ಬಂಟ್ವಾಳ್,ಕೋಶಾಧಿಕಾರಿ ಮನೋಜ್ ಸಾಲ್ಯಾನ್ , ಪ್ರಮುಖರಾದ ಕುಟ್ಟಿ ಮೂಲ್ಯ ,ರಮೇಶ್ ಕೊಡಮನ್ಕರ್ ,ಸದಾಶಿವ ಮೂಲ್ಯ ಉಪಸ್ಥಿತರಿದ್ದರು .
ಸಂಘದ ಅಧ್ಯಕ್ಷ, ಅತಿಥಿ ಗಣ್ಯರು ಹಾಗೂ ಸಂಘದ ಪದಾದಿಕಾರಿಗಳು ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಸರಸ್ವತಿ ಕುಲಾಲ್ ,ಅನಿತಾ ಕೊಡಮನ್ಕರ್,ಆಶಾ ಮೂಲ್ಯ ಪ್ರಾರ್ಥನೆ ಗೈದರು .ಅಧ್ಯಕ್ಷ ಹರೀಶ್ ಕುಲಾಲ್ ಸ್ವಾಗತಿಸಿದರು .
ಮುಖ್ಯ ಅತಿಥಿ ಗಣ್ಯರನ್ನು ಅಧ್ಯಕ್ಷ ಹರೀಶ್ ಕುಲಾಲ್ ಮತ್ತು ಪದಾಧಿಕಾರಿಗಳು ಶಾಲು ,ಪಲ ಪುಷ್ಪ ,ಸ್ಮರಣಿಕೆ ನೀಡಿ ಸನ್ಮಾನಿಸಿದರು ,ವೇದಿಕೆಯಲ್ಲಿದ್ದ ಪದಾದಿಕಾರಿಗಳನ್ನು ಸಂಘದ ಸದಸ್ಯರು ಹೂ ಗುಚ್ಛ ನೀಡಿ ಗೌರವಿಸಿದರು ,ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು, ಸಾಧಕರನ್ನು ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಪುಷ್ಪ ಗುಚ್ಛ ನೀಡಿ ಗೌರವಿಸಿದರು , ಮುಖ್ಯ ಅತಿಥಿಗಳ ಪರಿಚಯವನ್ನು ಆಶಾ ಮೂಲ್ಯ ಮತ್ತು ಸರಸ್ವತಿ ಕುಲಾಲ್ ಓದಿದರು . ಈ ಸಂದರ್ಭದಲ್ಲಿ ಪ್ರತಿಬಾನ್ವಿತ ವಿಧ್ಯಾರ್ಥಿಗಳನ್ನು ಹಾಗೂ ಸಮಾಜದ ಹಿರಿಯರನ್ನು ಗೌರವಿಸಲಾಯಿತು .ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದ ಮಕ್ಕಳನ್ನು ಗೌರವಿಸಲಾಯಿತು .
ಮಹಿಳಾ ವಿಭಾಗದ ಅಧ್ಯಕ್ಷೆ ಸರಸ್ವತಿ ಕುಲಾಲ್ ರವರು ಸಂಘದ ವಾರ್ಷಿಕ ವರದಿಯನ್ನು ಸಬೆಯ ಮುಂದಿಟ್ಟರು ,ಕೊಶಾದಿಕಾರಿ ಮನೋಜ್ ಸಾಲ್ಯಾನ್ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದನೆ ಪಡೆದರು,
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಮಾಜದ ಮಕ್ಕಳಿಂದ ವಿವಿದ ರೀತಿಯ ನೃತ್ಯ ವೈವಿದ್ಯಮಯ ಕಾರ್ಯಕ್ರಮಗಳು , ವಾಣಿಶ್ರೀ ಕಲಾವಿದೆರ್ ನೆಲ್ಯಾಡಿ ಇವರಿಂದ ದಯಾನಂದ ವಾಣಿಶ್ರೀ ನಿರ್ದೇಶನದಲ್ಲಿ ತುಳುನಾಡ ಬೊಳ್ಳಿ ರವಿ ರಾಮಕುಂಜ ಅಭಿನಯದ ಕುಸಲ್ದ್ ಮಸಾಲೆ ಎಂಬ ಹಾಸ್ಯಮಯ ಕಾರ್ಯಕ್ರಮ ಪ್ರದರ್ಶನಗೊಂಡಿತು .ಸರಸ್ವತಿ ಕುಲಾಲ್ ಮತ್ತು ಅನಿತಾ ಕೊಡಮನ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
ಸಂಘದ ಪ್ರಮುಖರಾದ ,ನಾಗೇಶ್ ಕುಲಾಲ್ , ಮಹಾಬಲ ಮೂಲ್ಯ ,ಅರುಣ್ ಕೊಡಮನ್ಕರ್ ,ವಾಸುದೇವ ಮೂಲ್ಯ , ಸುರೇಂದ್ರ ಮೂಲ್ಯ ,ಶಿವಪ್ರಸಾದ್ ಕೊಡಮನ್ಕರ್ ,ಮಹೇಶ್ ಮೂಲ್ಯ ,ದಾಮೋಧರ ಮೂಲ್ಯ , ಹರೀಶ್ ಮೂಲ್ಯ ,ರಮೇಶ್ ಮೂಲ್ಯ ,ವಿಟ್ಟಲ್ ಮೂಲ್ಯ ,ಮಹಿಳಾ ವಿಬಾಗದ ಪ್ರಮುಖರಾದ ,ಶ್ರೀಮತಿಯರಾದ ಶಾರದಾ ಮೂಲ್ಯ ,ಯಶೋದ ಎಸ್.ಮೂಲ್ಯ ,ಕುಶಾಲ ಡಿ.ಮೂಲ್ಯ ,ವಿದ್ಯಾಶ್ರೀ ಕುಲಾಲ್ ,ಜಯಂತಿ ಎಸ್.ಮೂಲ್ಯ ,ನಿಶಾ ಡಿ.ಕುಲಾಲ್ ,ಭಾಗ್ಯಶ್ರೀ ಕುಲಾಲ್ ,ಸುಜಾತಾ ಅರ್ .ಕುಲಾಲ್ ,ರೂಪಾಲಿ ವಿ .ಮೂಲ್ಯ ,ಶೋಭಾ ಪಿ ,ಕುಲಾಲ್ ,ಶ್ವೇತಾ ಎಚ್ .ಕುಲಾಲ್ ,ಯಶಸ್ವಿನಿ ಎಂ .ಕುಲಾಲ್ ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು .
ಪುಣೆಯಲ್ಲಿ 45 ವರ್ಷಗಳಿಂದ ನಮ್ಮ ಕುಲಾಲ ಸಂಘವು ಸಮಾಜದ ಎಲ್ಲಾ ಜನರನ್ನು ಒಗ್ಗುಡಿಸಿಕೊಂಡು ಕುಲಾಲ ಭಾಂದವರ ಏಳಿಗೆಗಾಗಿ ಶ್ರಮಿಸುತ್ತಿದೆ ,ನಮ್ಮ ಸಮಾಜದ ಯುವ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಯಲ್ಲಿ ,ಸಮಾಜ ಸೇವೆಯೊಂದಿಗೆ ಕಲಾ ಸೇವೆಯಲ್ಲೂ ತೊಡಗಿಸಿಕೊಂಡಿದೆ , ವರ್ಷಂಪ್ರತಿ ಸಂಘದ ಮುಖಾಂತರ ನಡೆಯುವ ಸ್ನೇಹ ಸಮ್ಮಿಲನ ,ಹಾಗೂ ಇತರೆ ಬೇರೆ ಬೇರೆ ಕಾರ್ಯಗಳಲ್ಲಿ ಸಮಾಜ ಭಾಂದವರು ಒಗ್ಗುಡಿಕೊಂಡು ಯಶಸ್ವಿಯಾಗಿ ಬಹಳ ಸುಂದರ ಕಾರ್ಯಕ್ರಮ ನಡೆಯುತ್ತಿದೆ .ಹಿರಿಯರು ಸಂಘ ಮುಂದೆ ಅಭಿವ್ರದ್ದಿಯನ್ನು ಹೊಂದಲು ಸೂಕ್ತ ಸಲಹೆ ಗಳನ್ನೂ ನೀಡಿ ನಮಗೆ ಮಾರ್ಗದರ್ಶನ ನಿಡುತಿದ್ದಾರೆ ಅಲ್ಲದೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಆಚಾರ ವಿಚಾರ ಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ,,ಸಂಘ ಸಮಾಜದ ಪ್ರತಿಯೋರ್ವ ವ್ಯಕ್ತಿಗೂ ಸಂಬಂದ ಪಟ್ಟಿದ್ದು ,ವ್ಯಕ್ತಿಗಿಂತ ಮೇಲಾಗಿ ಸಂಘ ಬೆಳೆಯಬೇಕು ಎಂಬುದೇ ನಮ್ಮ ಉದ್ದೇಶ .ಕಾರ್ಯಕ್ರಮಕ್ಕೆ ಸರ್ವ ಭಾಂದವರು ಸಹಕಾರ ನೀಡಿದ್ದಾರೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ . ಹರೀಶ್ ಕುಲಾಲ್ ಮುಂಡ್ಕೂರು ,ಅದ್ಯಕ್ಷರು ಕುಲಾಲ ಸಂಘ ಪುಣೆ
ಸಮಾಜದ ಮೇಲಿನ ಪ್ರೀತಿ ಮತ್ತು ಸೇವಾ ಮನೋಭಾವ ನಮ್ಮಲ್ಲಿರಬೇಕು ,ನಮಗೆ ದೇವರು ನೀಡಿದ ಶಕ್ತಿಗೆ ಅನುಸಾರವಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ದೃಡ ಸಂಕಲ್ಪವು ನಮ್ಮಲ್ಲಿರಬೇಕು ,ನಾವು ಪ್ರೀತಿಯಿಂದ ಮಾಡಿದ ಸೇವೆಯಿಂದ ಸಂತೃಪ್ತಿಯು ಸಿಗುತ್ತದೆ , ನಮ್ಮ ಸಮಾಜದ ಯುವ ಜನತೆ ಮುಂದೆ ಬಂದು ಸಂಘದ ಜೊತೆ ಸೇರಿಕೊಂಡರೆ ಸಂಘಟನೆಗೆ ಬಲ ಬರುತ್ತದೆ ಮಹಿಳಾ ವಿಬಾಗದ ಸಹಕಾರ ವು ಮುಖ್ಯ .ಪುಣೆ ಕುಲಾಲ ಸಂಘ ಸಮಾಜ ಭಾಂದವರಿಗೆ ಸೇವಾ ಕಾರ್ಯಗಳನ್ನುಮಾಡುತ್ತಾ ಮಕ್ಕಳ ಶೈಕ್ಷಣಿಕ ,ಮತ್ತು ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತಿದೆ .ನಮ್ಮ ಸಮಾಜಕ್ಕೆ ನನ್ನಿಂದಾಗುವ ಸಹಕಾರ ನೀಡಲು ನಾನು ಕೂಡಾ ಸಿದ್ದ -ಶ್ರೀ ಸುನಿಲ್ ರಾಜು ಸಾಲ್ಯಾನ್ - ಉಪಾಧ್ಯಕ್ಷ,ರು ಧನ ಸಂಗ್ರಹ ಸಮಿತಿಯ ಕುಲಾಲ ಭವನ ಮಂಗಳೂರು.
ನಮ್ಮ ಸಮಾಜ ,ನಮ್ಮ ಸಂಘ ,ನಮ್ಮ ಪ್ರತಿಷ್ಟೆ ಎಂಬ ಹೆಗ್ಗಳಿಕೆ ಮತ್ತು ಸಮಾಜದ ಬಗ್ಗೆ ಅಸಕ್ತಿ ಎಲ್ಲರಲ್ಲೂ ಇರಬೇಕು, ನಾವು ಸಮಾಜಕ್ಕಾಗಿ ಯಾವ ರೀತಿಯ ಸೇವೆಯನ್ನು ಮಾಡಿದ್ದೇವೆ ಹಾಗೂ ಯಾವ ಸೇವೆ ಮಾಡಲು ಸಾಧ್ಯ ಎಂಬ ಮನಸ್ಸು ಮತ್ತು ಆಸಕ್ತಿ ನಮ್ಮಲ್ಲಿದ್ದರೆ ಸಂಘಟನೆಗಳು ಬೆಳೆಯುತ್ತವೆ ,ಮುಂಬಯಿ ಕುಲಾಲ ಸಂಘ ಕೂಡಾ ಸಮಾಜದ ಭಾಂದವರ ಏಳಿಗೆಗಾಗಿ ಶ್ರಮಿಸುತಿದೆ ,ಹಾಗೆಯೇ ನಮ್ಮ ಪ್ರತಿಷ್ಠೆಯ ಮಂಗಳೂರು ಕುಲಾಲ ಭವನದ ನಿರ್ಮಾಣಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಇದ್ದೇವೆ. ಪುಣೆಯ ಭಾಂದವರ ಸಹಕಾರ ಕೂಡಾ ಸಿಗಲಿ .ಬರುವ ವರ್ಷ ನಡೆಯಲಿರುವ ಅಮೂಲ್ಯ ಪತ್ರಿಕೆಯ ಬೆಳ್ಳಿ ಮಹೋತ್ಸವವಕ್ಕೆ ತಮ್ಮೆಲ್ಲರ ಸಹಕಾರ ಸಿಗಲಿ,ಪುಣೆ ಕುಲಾಲ ಸಂಘದ ಅಭಿವ್ರದ್ದಿಗೆ ಶುಭ ಹಾರೈಸುತ್ತೇನೆ . –ರಾಘುಎ . ಮೂಲ್ಯ-ಅಧ್ಯಕ್ಷರು ಕುಲಾಲ ಸಂಘ ಮುಂಬಯಿ
ನಾವೆಲ್ಲರೂ ಉತ್ತಮ ಸಮಾಜದಿಂದ ಬಂದವರು ,ಸಮಾಜ ಸೇವೆ ಮಾಡುವ ಅವಕಾಶ ಸಿಕ್ಕಿದಾಗ ಅದನ್ನು ಸಮಾಜಕ್ಕೆ ಮಾದರಿಯಾಗಿ ಮಾಡಿ ತೋರಿಸುವ ಛಲ ಮತ್ತು ಬುದ್ದಿವಂತಿಕೆ ನಮ್ಮಲ್ಲಿರಬೇಕು ,ಸಂಘದ ಪ್ರಮುಖರು ಎಲ್ಲರನ್ನೂ ಕೂಡಿಕೊಂಡು ಉತ್ತಮ ಕಾರ್ಯಗಳನ್ನು ಮಾಡಿದಾಗ ಸಂಘಕ್ಕೆ ಗೌರವ ಲಭಿಸುತ್ತದೆ ,ಇಂದಿನ ವಾರ್ಷಿಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಭಾಂದವರು ಸೇರಿದ್ದಾರೆ ಮುಂದಿನ ವರ್ಷ ಈ ಸಂಖ್ಯೆ ದ್ವಿಗುಣಗೊಳಿಸುವ ಕಾರ್ಯ ಸಂಘದಿಂದ ಆಗಬೇಕು ,ಇಲ್ಲಿ ಉತ್ತಮ ಕಾರ್ಯಕ್ರಮ ಮೂಡಿ ಬಂದಿದೆ ಶುಭವಾಗಲಿ - ಶ್ರೀ ಜಯರಾಜ್ ಎಸ್ .ಬಂಗೇರ ಮಾಜಿ ಅಧ್ಯಕ್ಷ ಬಂಟ್ವಾಳ ನಗರ ರೋಟರಿ ಕ್ಲಬ್
ಇಂದಿನ ಜನ ಜೀವನ ಸಮಾಜದಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದು ತಕ್ಕ ಮಟ್ಟಿನ ವ್ಯವಸ್ಥೆಯೊಂದಿಗೆಜೀವನ ಸಾಗಿಸುತ್ತಾರೆ ,ಪ್ರತಿ ಮನೆಯಲ್ಲೂ ಉನ್ನತ ವ್ಯಾಸಂಗ ಮಾಡಿ ಉತ್ತಮ ವಿದ್ಯಾವಂತರು ಇರುತ್ತಾರೆ ,ಆದರೆ ವಿದ್ಯೆಯ ಜೊತೆಯಲ್ಲಿ ನಮ್ಮ ಸಮಾಜದ ಮೇಲಿನ ಪ್ರೀತಿಯು ಇರಬೇಕು ,, ಇದು ನಮ್ಮ ಎಲ್ಲಾ ಸಮಾಜ ಭಾಂದವರಲ್ಲಿದ್ದರೆ ಸಂಘ ಬೆಳೆಯುತ್ತದೆ ,ನಮ್ಮ ಜ್ಯೋತಿ ಕೋ ಅಪರೆಟಿವ್ ಬ್ಯಾಂಕ್ ಸಮಾಜದ ಅಭಿವ್ರದ್ದಿಗಾಗಿ ಇದ್ದು ಇದರ ಸದುಪಯೋಗವನ್ನು ಸಮಾಜ ಭಾಂದವರು ಪಡೆಯಬೇಕು .ಪುಣೆಕುಲಾಲ ಭಾಂದವರ ಸಂಪೂರ್ಣ ಸಹಕಾರ ಬ್ಯಾಂಕ್ ಜೊತೆಯಲ್ಲಿ ಇರಲಿ -ಶ್ರೀ ಗಿರೀಶ್ ಸಾಲ್ಯಾನ್ -ಕಾರ್ಯಾಧ್ಯಕ್ಷರು ಜ್ಯೋತಿ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಮುಂಬಯಿ .
ಪುಣೆ ಕುಲಾಲ ಸಂಘದ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಸಮಾಜಕ್ಕೆ ಮಾದರಿಯಾಗಿ ಕೊಂಡೊಯ್ಯಬೇಕು ,ಸಂಘ ಕಟ್ಟುವುದು ದೊಡ್ಡದಲ್ಲ ಅದನ್ನು ಸಮಾಜ ಮುಖಿಯಾಗಿ ನಡೆಸುವುದು ಮುಖ್ಯ ,ಪುಣೆ ಕುಲಾಲ ಸಂಘ ಉತ್ತಮ ಕಾರ್ಯ ಮಾಡುತಿದ್ದು ಸಂಘದ ಜೋತೆಯಲ್ಲಿ ಎಲ್ಲಾ ಸಮಾಜ ಭಾಂದವರು ಕೂಡಿ ಕೊಂಡು ನಮ್ಮದೇ ಮನೆಯ ಸಂಸ್ಥೆ ಎಂಬ ಭಾವನೆಯಿಂದ ಕೆಲಸ ಕಾರ್ಯ ಮಾಡಬೇಕು-ಇದುವೇನೀವು ಸಂಘಕ್ಕೆ ನೀಡುವ ದೊಡ್ಡ ಕಾಣಿಕೆ -ಶ್ರೀ ದೇವದಾಸ್ ಕುಲಾಲ್ ಗೌರವಾಧ್ಯಕ್ಷರು ,ಮುಂಬಯಿ ಕುಲಾಲ ಸಂಘ
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment