ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿ 42ನೇ ವಾರ್ಷಿಕ ಮಹಾಸಭೆ.
ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿ 42ನೇ ವಾರ್ಷಿಕ ಮಹಾಸಭೆ.
ಕುಲಾಲ ಸಮಾಜದ ಅಭಿವೃದ್ಧಿಗಾಗಿ ಸೊಸೈಟಿ ಪ್ರಾರಂಭಗೊಂಡಿದೆ, ಬಲಿಷ್ಟಗೊಳಿಸಲು ಸಹಕರಿಸಿ :ಗಿರೀಶ ಬಿ. ಸಾಲ್ಯಾನ್
ಚಿತ್ರ ವರದಿ : ದಿನೇಶ್ ಕುಲಾಲ್.
ಸೊಸೈಟಿಯಅಭಿವೃದ್ಧಿಯಲ್ಲಿ ಕುಲಾಲ ಬಂಧುಗಳು ಮುಖ್ಯ ಪಾತ್ರವಾಗಬೇಕು:
ರಘು ಮೂಲ್ಯ ಪಾದೆ ಬೆಟ್ಟು..
ಮುಂಬೈ ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ಪಾದೆಬೆಟ್ಟು ಮಾತನಾಡುತ್ತಾ ಹಿರಿಯರು ಬಹಳ ಉದ್ದೇಶದಿಂದ ಸೊಸೈಟಿಯನ್ನು ಪ್ರಾರಂಭಿಸಿದ್ದಾರೆ ಅದನ್ನು ಇಂದಿನ ತನಕ ಸಮರ್ಥ ರೀತಿಯಲ್ಲಿ ಆಡಳಿತ ಮಂಡಳಿ ನಿರ್ವಹಿಸಿದ ಬಂದಿದೆ. ಸೊಸೈಟಿಯ ವ್ಯವಹಾರಗಳು ಇನ್ನಷ್ಟು ಅಭಿವೃದ್ಧಿಗೊಳ್ಳಲು ಮುಂಬೈ ಕುಲಾಲಸಂಘದ ಪ್ರತಿ ಸ್ಥಳೀಯ ಸಮಿತಿಗಳು ಸಹಕಾರ ನೀಡಲು ಸಿದ್ಧವಿದೆ. ಸಮಾಜದ ಬಂಧುಗಳು ಸೊಸೈಟಿಯಲ್ಲಿ ವ್ಯವಹಾರ ಮಾಡುವಾಗ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರೆ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ನೀಡಲು ನಮ್ಮ ಸದಸ್ಯರು ಸಹಕರಿಸುತ್ತಾರೆ. ಸಮಾಜದಪ್ರತಿಯೊಬ್ಬ ಬಾಂಧವರು ಜ್ಯೋತಿಯಲ್ಲಿ ವ್ಯವಹಾರವನ್ನು ಮಾಡಬೇಕು. ಸೊಸೈಟಿಯಲ್ಲಿ ಹೆಚ್ಚು ಆದಾಯ ಬಂದರೆ ನಮಗೆ ಡಿವಿಡೆಂಡ್ ರೂಪದಲ್ಲಿ ಆದಾಯ ಸಿಗುತ್ತದೆ , ನಮ್ಮ ಹಣವನ್ನು ನಾವೇ ಪಡೆಯುವಂತೆ ಆಗುತ್ತದೆ. ಸೊಸೈಟಿಯ ಸಿಬ್ಬಂದಿಗಳಿಗೆ ಉತ್ತಮ ಸೌಲಭ್ಯವನ್ನು ನೀಡಬೇಕು. ಅವರಿಂದ ಇನ್ನಷ್ಟು ಹೆಚ್ಚು ಸೇವಾ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ನುಡಿದರು,
ಮುಂಬಯಿ, ಸೆ. 24.ಕುಲಾಲ ಸಂಘ ಮುಂಬಯಿ ಸಂಚಾಲತ್ವದ ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿಯ 42ನೇ ವಾರ್ಷಿಕ ಮಹಾಸಭೆಯು ಸೆ. 23ರ ಶನಿವಾರದಂದು ಕೋಟೆ ಯ ಬಜಾರ್‌ಗೇಟ್ ನ
ಆರ್ಯ ಸಮಾಜ ಭವನ ದಲ್ಲಿ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ ಬಿ. ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾರಂಭದಲ್ಲಿ ಕಾರ್ಯಧ್ಯಕ್ಷರಾದ ಗಿರೀಶ್ ಬಿ ಸಾಲಿಯಾನ್ ಮತ್ತು ಕಾರ್ಯಕಾರಿ ಸದಸ್ಯರು ಹಾಗೂ ಕುಲಾಲ ಸಂಘದ ಅಧ್ಯಕ್ಷರಾದ ರಘು ಮೂಲ್ಯ ಪಡೆಬೆಟ್ಟು ರವರ ಉಪಸ್ಥಿಯಲ್ಲಿ ದೀಪ ಪ್ರಜ್ವಳಿಸಿ ಮಹಾಸಭೆಯನ್ನು ಉದ್ಘಾಟಿಸಲಾಯಿತು
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗಿರೀಶ ಬಿ. ಸಾಲ್ಯಾನ್ 42 ಗಳ ಹಿಂದೆ ಸೊಸೈಟಿಯನ್ನುಕುಲಾಲ ಸಮಾಜದ ಬಂಧುಗಳ ಆರ್ಥಿಕ ಅಭಿವೃದ್ಧಿಗಾಗಿ ಸಮಾಜದ ಹಿರಿಯರು ಸ್ಥಾಪಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ42 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸುವ ಯೋಜನೆ ಇದೆ. ಅದಕ್ಕೆ ಸಮಾಜ ಬಾಂಧವರು ಹಿತೈಷಿಗಳು ಸೇರುದಾರರು ಸಹಕಾರ ಕುಲಾಲಸಮಾಜದ ಬಂಧುಗಳ ಅಭಿವೃದ್ಧಿಗಾಗಿ ಅವರ ವ್ಯವಹಾರಗಳನ್ನು ಆದಾಯಗಳನ್ನು ಹೆಚ್ಚು ನೋಡದೆ ಸಂಬಂಧಗಳು ಸಂಪರ್ಕಗಳನ್ನು ನೋಡಿ ವ್ಯವಹಾರವನ್ನುಇಂದಿನವರೆಗೆ ನಡೆಸುತ್ತಾ ಬಂದಿದ್ದೇವೆ. ಬಹಳಷ್ಟು ಸಮಾಜ ದ ಗ್ರಾಹಕರು ಸೊಸೈಟಿಯಲ್ಲಿ ಸಾಲ ಪಡೆದ ಮೇಲೆ ಹಿಂದಿರುಗಿಸುವ ಸಂದರ್ಭದಲ್ಲಿ ಸೊಸೈಟಿಗೆ ಬಹಳಷ್ಟು ಸಮಸ್ಯೆಗಳನ್ನು ನೀಡುತ್ತಿದ್ದಾರೆ. ಸೊಸೈಟಿ ಅಭಿವೃದ್ಧಿ ಯದಾಗ ಅದರ ಲಾಭ ಗ್ರಾಹಕರಿಗೆ. .ಶೇರುದರಿಗೆ ಸಮಾಜ ಬಾಂಧವರಿಗೆಲಭಿಸುತ್ತದೆ. ಗ್ರಾಹಕರ. ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸೊಸೈಟಿ ರೂಪಿಸಿಕೊಂಡಿದೆ. ಎಲ್ಲಾ ರೀತಿಯ ಅನುಕೂಲದ ಸೌಲಭ್ಯಗಳನ್ನು ಸೊಸೈಟಿ ನೀಡುತ್ತಾ
ಬೆಳೆದಿದೆ. ಸೊಸೈಟಿಯ ಮೇಲೆ ಸಹಕರಿಗೆ ಒಳ್ಳೆಯ ಸಂಬಂಧಗಳು ಮತ್ತು ವಿಶ್ವಾಸಗಳು ಬೆಳೆದಿದೆ ಆದ್ದರಿಂದ ವ್ಯವಹಾರಗಳು ಬಲಿಷ್ಠಗೊಂಡಿದೆ. ಈ ವರ್ಷ ವ್ಯವಹಾರದಲ್ಲಿಆದಾಯ ಕಡಿಮೆಯಾಗಿದೆ. ಆದ್ದರಿಂದಡಿವಿಡೆಂಡ್ ಕಡಿಮೆ ನೀಡುವ ಅಂತಾಗಿದೆ. ಎಲ್ಲಾ ರೀತಿಯಲ್ಲಿ ಸೊಸೈಟಿ ಭದ್ರತೆಯಿಂದ ಇದೆ . ಗ್ರಾಹಕರಿಗೆ ಮತ್ತು ಸಮಾಜ ಬಾಂಧವರಿಗೆ ಸುಲಭದ ರೀತಿಯಲ್ಲಿ ವ್ಯವಹಾರ ನಡೆಸಲು ಆಡಳಿತ ಮಂಡಳಿ ಶ್ರಮಿಸುತ್ತಿದೆ . ಕುಲಾಲ ಸಂಘ ಮತ್ತು ಸ್ಥಳೀಯ ಸಮಿತಿಗಳು ಬಹಳಷ್ಟು ಸಹಕಾರವನ್ನು ನೀಡುತ್ತ ಬಂದಿದೆ ಮುಂದಿನ ದಿನಗಳಲ್ಲಿ ಕೂಡ ತಮ್ಮೆಲ್ಲರ ಸಹಕಾರ ಅಗತ್ಯ ಬೇಕಾಗಿದೆ. ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನೆಲ್ಲ ರೂಪಿಸಿಕೊಂಡಿದ್ದೇವೆ ,ಅದೆಲ್ಲವೂ ಯಶಸ್ವಿಯಾಗಬೇಕೆಂದರೆ ಸಮಾಜದ ಬಂಧುಗಳೆಲ್ಲರೂ ನಮ್ಮೊಂದಿಗೆ ವ್ಯವಹಾರ ನಡೆಸಬೇಕು ಎಂದು ಶೇಕಡಾ 4ರಷ್ಟು, ಡಿವಿಡೆಂಡ್ ನೀಡುವುದಾಗಿ ಘೋಷಿಸಿ ದರು,
ಸೊಸೈಟಿಯ ಕಾರ್ಯದರ್ಶಿ ಪಿ. ಶೇಖರ ಮೂಲ್ಯ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು. ಕೋಶಾಧಿಕಾರಿ ಭಾರತಿ ಪಿ. ಆರ್ಕನ್ ವರ್ಷದ ವ್ಯವಹಾರ ತಿಳಿಸುತ್ತಾ ಒಟ್ಟು ಸೇರುದಾರರು 5897,ಶೇರು ಬಂಡವಾಳ 348.29 ಲಕ್ಷ,, ಒಟ್ಟು ಮೀಸಲು364.23 ಲಕ್ಷ, ಒಟ್ಟು ಠೇವಣಿ 2753.60 ಲಕ್ಷ,. ಒಟ್ಟು ಮುಂಗಡ 2130.59., ಒಟ್ಟು ಹೂಡಿಕೆ 1130.57 ಲಕ್ಷ. ದುಡಿಯುವ ಬಂಡವಾಳ 3588.53 ಲಕ್ಷ.,, ನಿವ್ವಳ ಲಾಭ6.70 ಲಕ್ಷ. .ಎನ್ ಪಿ ಎ: ಶೇ.4.29; ಅಡಿಟ್ ವರ್ಗೀಕರಣ `ಎ' : ಪ್ರಾಸ್ತಾವಿಕ ಲಾಭಾಂಶ: ಶೇ.4 ಆಗಿದೆ. ಒ ಟ್ಟು ವ್ಯವಹಾರಗಳನ್ನು ಸಭೆಗೆ ತಿಳಿಸಿದರು.
ಉಪ ಕಾರ್ಯಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಮುಖ್ಯ ವ್ಯವಹಾರಗಳ ಬಗ್ಗೆ ತಿಳಿಸಿದರು ಆ ಬಳಿಕ ಸದಸ್ಯರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನದ ಯಾದಿಯನ್ನು ಓದಿದರು.
ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಾದ ರಘು ಮೂಲ್ಯ ಪಾದೆಬೆಟ್ಟು ಹಾಗೂ
ಸಭೆಯಲ್ಲಿ ಉಪಸ್ತರಿದ್ದ ದೊಂಬಿವಲಿ ತುಳುಶ್ರೀ ಕೋ. ಆಪ್. ಕ್ರೆಡಿಟ್ ಸೊಸೈಟಿ ಮಾಜಿ ಕಾರ್ಯಾಧ್ಯಕ್ಷ.ಎಂ ಪಿ ಪೈ .ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿ ಮಾಜಿ ನಿರ್ದೇಶಕ. ಎಚ್.ಎಂ. ಥೋರಟ್. ಕುಲಾಲಸಂಘದ ಧಾಣೆ- ಖರ್ಜತ್ ಸ್ಥಳೀಯಸಮಿತಿಯ ಕಾರ್ಯ ಧ್ಯಕ್ಷ ಲಕ್ಷ್ಮಣ್ ಸಿ ಮೂಲ್ಯ. ಮೀರಾ ರೋಡ್ - ವಿ ರಾರ್ ಸ್ಥಳೀಯಸಮಿತಿಯ ಕಾರ್ಯ ಧ್ಯಕ್ಷ ಶಂಕರ್ ವೈ ಮೂಲ್ಯ. ಸುನಿಲ್ ರಾಜು ಸಾಲಿಯಾನ್. ಅಶೋಕ್ ಬಂಜನ್. Adv. ಉಮಾನಾಥ್ ಮೂಲ್ಯ. ದೇವದಾಸ್ ಕುಲಾಲ್ ರವರು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು
ವೇದಿಕೆಯಲ್ಲಿ ಉಪ ಕಾರ್ಯಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಗೌ. ಕಾರ್ಯದರ್ಶಿ ಪಿ. ಶೇಖರ ಮೂಲ್ಯ, ಗೌ. ಕೋಶಾಧಿಕಾರಿ ಭಾರತಿ ಪಿ. ಆರ್ಕನ್, ನಿರ್ದೇಶಕರುಗಳಾದ ಡೊಂಬಯ್ಯ ಐ ಮೂಲ್ಯ, ಚಂದು ಕೆ ಮೂಲ್ಯ, ಸುರೇಖಾ ಕುಲಾಲ್, ಕರುಣಾಕರ ಬಿ. ಸಾಲ್ಯಾನ್, ಗಿರೀಶ್ ವಿ. ಕರ್ಕೇರ, ನ್ಯಾಯವಾದಿ ಉಮಾನಾಥ ಕೆ. ಮೂಲ್ಯ, ದೇವದಾಸ ಎಮ್. ಬಂಜನ್, ನ್ಯಾಯವಾದಿ ಸೋಪನ್ ಎಸ್. ವಾಂಖೇಡೆ, ನ್ಯಾಯವಾದಿ ಪವಿತ್ರಾ ಮನೇಶ್, ವೇಣುಗೋಪಾಲ ಡಿ. ಕರ್ಕೇರ ಇವರು ಉಪಸ್ಥರಿದ್ದರು.
ವಿವಿಧ ಶಾಖೆಗಳಲ್ಲಿ ಅತಿ ಹೆಚ್ಚು ಡೈಲಿ ಪಿಗ್ಮಿ ಕಲೆಕ್ಷನ್ ಮಾಡಿದ ಏಜೆಂಟರನ್ನು ಗೌರವಿಸಲಾಯಿತು.,
.ಕರುಣಾಕರ ಬಿ. ಸಾಲ್ಯಾನ್ ಧನ್ಯವಾದ ನೀಡಿದರು.
ಕುಲಾಲಸಂಘದ ಪದಾಧಿಕಾರಿಗಳು, ವಿವಿಧ ಸಮಿತಿಯ ಕಾರ್ಯಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಸಂಘ ಸಂಸ್ಥೆಯ ಅಧ್ಯಕ್ಷರು ,ಪದಾಧಿಕಾರಿಗಳು ವಿವಿಧ ಸೊಸೈಟಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು..
--------------------













Post a Comment