ಮೂಲತ್ವ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಅ.2.ರಂದು ರಕ್ತದಾನ ಶಿಬಿರ
ಮುಲಾತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ , ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ , ಲಿಯೋ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್,ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಜಂಟಿ ಆಶ್ರಯದಲ್ಲಿ , ಭಾರತೀಯ ರೆಡ್ ಕ್ರಾಸ್ ಸೊಸೈಟಿ ಇದರ ಸಹಬಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಆಕ್ಟೊಬರ್ 2 ರಂದು ಬೆಳ್ಳಿಗ್ಗೆ 9.30ಕ್ಕೆ ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ , ಮಂಗಳೂರು , ಇಲ್ಲಿ ಅಯೋಜಿಸಲಾಗಿದ್ದು , ಜನರು ಹೆಚ್ಚಿನ ಸಂಖೆಯಲ್ಲಿ ಬಂದು ರಕ್ತದಾನ ಮಾಡುವಂತ್ತೆ ಮೂಲತ್ವ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಭಾರತೀಯ ರೆಡ್ ಕ್ರಾಸ್ ನ ಸಭಾಪತಿ ಸಿಎ ಶಾಂತರಾಮ ಶೆಟ್ಟಿ, ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಲಯನ್ ಕರುಣಾಕರ ಎಂ.ಎಚ್., ಲಿಯೋ ಕ್ಲಬ್ ನ ಅಧ್ಯಕ್ಷ ಲಿಯೋ ಕವನ್ ಸುವರ್ಣ, ವಿಶ್ವಬೆಳಕು ಸೌಹಾರ್ದ ಸಂಘದ ಅಧ್ಯಕ್ಷೆ ಅಕ್ಷತಾ ಕದ್ರಿ ವಿನಂತಿಸಿದ್ದಾರೆ.
Post a Comment