ಜಯ ಸಿ ಸುವರ್ಣ ಸಂಸ್ಮರಣೆ ಹಾಗೂ ಲೇಖಕಿ ,ಕವಯತ್ರಿ,ಅನಿತಾ ಪಿ.ತಾಕೊಡೆ ಅವರ ಸುವರ್ಣಯುಗ ಕೃತಿ ಲೋಕಾರ್ಪಣೆ


ಜಯ ಸುವರ್ಣರು ಹೃದಯ ಶ್ರೀಮಂತಿಕೆಯ ಬಾಸ್ - 
ಸಚಿವ ಮಧು ಬಂಗಾರಪ್ಪ.

ವರದಿ : ವಾಣಿ ಪ್ರಸಾದ್,  ಚಿತ್ರ : ಭಾಸ್ಕರ ಕಾಂಚನ್

ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಅಯೋಜನೆಯಲ್ಲಿ ಜಯ ಸಿ ಸುವರ್ಣ ಸಂಸ್ಮರಣೆ ಹಾಗೂ ಲೇಖಕಿ, ಕವಯತ್ರಿ,ಅನಿತಾ ಪಿ.ತಾಕೊಡೆ ಅವರ ಸುವರ್ಣಯುಗ ಕೃತಿ ಲೋಕಾರ್ಪಣೆ ಸಮಾರಂಭವು  ಸೆ.30 ರಂದು ಸಂಜೆ  ಮುಂಬಯಿ ವಿಶ್ವವಿದ್ಯಾಲಯ, ಕಲಿನಾ ಕ್ಯಾಂಪಸ್ ನ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಜರಗಿತು.



 ಸಂಸದ ಗೋಪಾಲ್ ಶೆಟ್ಟಿ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುತ್ತಾ "ಜಯ ಸುವರ್ಣ ಅವರ ಕೃತಿ, ಯೋಗ್ಯ ಮತ್ತು ಸರಿಯಾದ ಸಮಯಕ್ಕೆ ಲೋಕಾರ್ಪಣೆಗೊಂಡಿದೆ. 1975 ರಿಂದ ಅವರ ಪರಿಚಯವಿದೆ, ಅವರು ಜನ ಸಾಮಾನ್ಯರಾಗಿ ಓರ್ವ ಪ್ರಭಾವಿ ನಾಯಕನಾಗಿ ಬೆಳೆದದ್ದು ಒಂದು ಮಹಾನ್ ಸಾಧನೆ. ಜಯ ಸುವರ್ಣ ಅವರು ಬಿಲ್ಲವರ ಏಸೋಸಿಯೇಷನ್ ಮೂಲಕ ಸಮಾಜಕ್ಕೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಅವರು ಎಲ್ಲಾ ಜಾತಿ, ಭಾಷಿಕರಿಂದ ಗೌರವಿಸಲ್ಪಟ್ಟಿದ್ದಾರೆ. ಭಾರತ್ ಬ್ಯಾಂಕ್ ನ ಶಾಖೆಗಳನ್ನು 100 ಕ್ಕೆ ವಿಸ್ತರಿಸಿದ್ದು, ಮರಾಠಿ ಮಣ್ಣಿನಲ್ಲಿ ಅಭೂತಪೂರ್ವ ಸಾಧನೆ. ಅವರು ಕಂಡ ಕನಸುಗಳನ್ನು ನನಸು ಮಾಡುವುದೆ, ಅವರಿಗೆ ನಾವೆಲ್ಲರೂ ನೀಡುವ ಗೌರವ ಎಂದರು.



ಸುವರ್ಣಯುಗ ಕ್ರತಿ ಬಿಡುಗಡೆ ಗೊಳಿಸಿದ ಕರ್ನಾಟಕ ಸರಕಾರದ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾದ ಮಧು ಬಂಗಾರಪ್ಪ ಮಾತನಾಡುತ್ತ "ಒಂದು ಅಪೂರ್ವ ಸಂಗಮ, ಕಲಿಯುಗದಲ್ಲಿ ಸುವರ್ಣಯುಗ ಬಂದದ್ದು ನನ್ನ ಅದ್ರಷ್ಟ. ನನ್ನ ತಂದೆ ಜಯ ಸುವರ್ಣರ ಆಪ್ತರು. ಜಯ ಸುವರ್ಣರು ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಜಯ ಸುವರ್ಣ ಅವರು ನಮ್ಮನ್ನು ಅವರ ಮಕ್ಕಳಂತೆ ಕಾಣುತ್ತಿದ್ದರು. ಅಷ್ಟು ಪ್ರೀತಿ, ವಿಶ್ವಾಸ, ಆತ್ಮೀಯತೆ ನಮ್ಮ ಎರಡು ಕುಟುಂಬದ ಜತೆಯಿತ್ತು, ಇದನ್ನು ಎಂದಿಗೂ ಮರೆಯುವಂತಿಲ್ಲ. ಭಾರತ್ ಬ್ಯಾಂಕ್ ದೊಡ್ಡ ಸಾಧನೆ ಮಾಡಿದೆ, ಇದನ್ನು ಗೌರವದಿಂದ ಉಳಿಸಿಕೊಳ್ಳಬೇಕು. ಭಾರತ್ ಬ್ಯಾಂಕ್ ನ್ನು ಉಳಿಸುವ ಕೆಲಸ ಆದರೆ ಅದು ಅವರಿಗೆ ಸಂದುವ ಗೌರವ. ಅವರ ಕೃತಿ ನನ್ನ ಕೈಯಿಂದ ಬಿಡುಗಡೆಗೊಳಿಸಿದ್ದು ನನ್ನ ಭಾಗ್ಯ. ಸಣ್ಣದಿರುವಾಗ ಎಲ್ಲರೂ ಜಯಣ್ಣ, ಜಯಣ್ಣ ಅನ್ನುತ್ತಿದ್ದಾಗ ಅವರು ಮುಂಬೈಯ ಬಾಸ್ ಎಂದು ಭಾವಿಸುತ್ತಿದ್ದೆ, ಆದರೆ ಅವರು  ಜೀವನ ಕಟ್ಟಿದ ರೀತಿ, ಅವರ ನಾಯಕತ್ವ ಗುಣ, ಅವರ ಸಾಧನೆ ಕಂಡಾಗ ಅವರು ಖಂಡಿತ ಹ್ರದಯ ಶ್ರೀಮಂತಿಕೆಯ ಬಾಸ್ ಎಂದು ನುಡಿದರು. 


ಕ್ರತಿಕಾರರಾದ ಅನಿತಾ ತಾಕೊಡೆ ಅವರನ್ನು ಸಂಸದ ಗೋಪಾಲ್ ಶೆಟ್ಟಿ , ಹಾಗೂ ಸಚಿವ ಮಧು ಬಂಗಾರಪ್ಪ ಅಭಿನಂದಿಸಿದರು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರ್ನಾಟಕ ಸಂಘ ದೊಂಬಿವಲಿಯ ಇಂದ್ರಾಳಿ ದಿವಾಕರ ಶೆಟ್ಟಿ, ಹಾಗೂ ನಿರೂಪಕ ಅಶೋಕ್ ಪಕ್ಕಳ ಅವರನ್ನು ಗೌರವಿಸಲಾಯಿತು. ಹಾಗೂ ಸಂಶೋಧನ ವಿದ್ಯಾರ್ಥಿಗಳಾದ ಅನಿತಾ ತಾಕೊಡೆ, ಅನಿತಾ ಶೆಟ್ಟಿ, ಸುರೇಖಾ ದೇವಾಡಿಗ ಅವರಿಗೆ ಜಯಲೀಲಾ ಶಿಷ್ಯ ವೇತನ ನೀಡಲಾಯ್ತು.

ಗೌರವ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ನಾರಾಯಣ ಗೌಡ, ತೋನ್ಸೆ ಜಯಕ್ರಷ್ಣ ಶೆಟ್ಟಿ, ಧರ್ಮಪಾಲ ದೇವಾಡಿಗ, ಡಾ.ರಾಜಶೇಕರ ಕೋಟ್ಯಾನ್, ಮುಖ್ಯ ಅತಿಥಿಗಳಾಗಿ ಡಾ.ವಿಶ್ವನಾಥ ಕಾರ್ನಾಡ್, ಡಾ. ತುಕರಾಮ ಪೂಜಾರಿ, ಉದ್ಯಮಿ ರವಿ. ಎಸ್. ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದು, ಜಯ ಸುವರ್ಣರು ಸಮಾಜಕ್ಕೆ ನೀಡಿದ ಕೊಡುಗೆ, ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

ಸಮಾರಂಭದ ಆದ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಪ್ರಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.



ಡಾ. ಉಮಾ ರಾಮರಾವ್ ಕೃತಿ ಪರಿಚಯಿಸಿದರು.
ಬಿಲ್ಲವರ ಏಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್, ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಎಸ್. ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.


ಜಯ ಸುವರ್ಣ ಅವರ ಸುಪುತ್ರರಾದ ಸೂರ್ಯಕಾಂತ್ ಸುವರ್ಣ, ಸುಭಾಷ್ ಸುವರ್ಣ, ದಿನೇಶ್ ಸುವರ್ಣ, ಯೋಗೇಶ್ ಸುವರ್ಣ ಮತ್ತು ಅವರ ಪರಿವಾರ, ಅಳಿಯ ಭಾಸ್ಕರ ಎಂ.ಸಾಲ್ಯಾನ್, ಸುವರ್ಣ ಕುಟುಂಬದ ಆಪ್ತರಾದ ಗಂಗಾಧರ ಜೆ.ಪೂಜಾರಿ, ಜಯ ಸುವರ್ಣ ಅವರ ಅಭಿಮಾನಿಗಳು, ವಿವಿಧ ಜಾತಿಯ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

No comments

Powered by Blogger.