ಸಾಫಲ್ಯ ಸೇವಾ ಸಂಘ ಮುಂಬಯಿಯ 69ನೇ ವಾರ್ಷಿಕ ಮಹಾಸಭೆ.
ವರದಿ : ವಾಣಿ ಪ್ರಸಾದ್, ಚಿತ್ರ : ಯೋಗೇಶ್ ಪುತ್ರನ್
ಮುಂಬಯಿಯ ಹಿರಿಯ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಸಾಫಲ್ಯ ಸೇವಾ ಸಂಘದ 69ನೇ ವಾರ್ಷಿಕ ಮಹಾಸಭೆ ಸೆ.24 ರಂದು ಸಂಜೆ 4 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗ್ರಹದಲ್ಲಿ
ಸಂಘದ ಅಧ್ಯಕ್ಷರಾದ ಶ್ರೀನಿವಾಸ ಪಿ.ಸಾಫಲ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿತು.ಸಮಾಜದ ಹಿರಿಯರಾದ ರಘುವೀರ ಅತ್ತಾವರ, ಓಂ ಪ್ರಕಾಶ್ ರಾವ್, ಶಂಕರ್ ಸಫಲಿಗ, ಸದಾನಂದ ಪುತ್ರನ್ ದೀಪ ಬೆಳಗಿ
ಮಹಾಸಭೆಗೆ ಚಾಲನೆ ನೀಡಿದರು.
ಗತ ವರ್ಷದ ವರದಿಯನ್ನು ಹಾಗೂ ವಾರ್ಷಿಕ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು.
ಸಭಿಕರ ಪರವಾಗಿ ಸದಾನಂದ ಪುತ್ರನ್, ದಿನೇಶ್ ಕಾಂಚನ್, ಶಂಕರ್ ಸಫಲಿಗ, ಡಾ.ಜಿ.ಪಿ.ಕುಸುಮ ಮಾತನಾಡಿ, ಸಲಹೆ-ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಾಫಲ್ಯ ಶಿಕ್ಷಣ ಯೋಜನೆಯ ಅಂಗವಾಗಿ 2 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಾಯಿತು.ಹಾಗೂ ವಿದ್ಯಾರ್ಥಿಗೆ ಕಂಪ್ಯೂಟರ್ ಕೋರ್ಸ್ ಮಾಡಲು ಆರ್ಥಿಕ ಸಹಾಯ ಮಾಡಲಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀನಿವಾಸ ಸಾಫಲ್ಯ ಅವರು "ಕಳೆದ 6 ವರ್ಷಗಳಿಂದ ವಿನೂತನ ಯೋಜನೆಗಳನ್ನು ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಲಭಿಸಿದೆ.ಒಂದು ಸಂಘ ಎಷ್ಟು ಕಾರ್ಯಕ್ರಮ ಮಾಡುತದೆ ಅನ್ನುವುದು ಮುಖ್ಯವಲ್ಲ, ಎಷ್ಟು ಕಾರ್ಯ-ಯೋಜನೆಗಳಿಂದ ಸಮಾಜ ಬಾಂಧವರು ಪ್ರಯೋಜನ ಪಡೆದಿದ್ದಾರೆ ಎನ್ನುವುದು ಮುಖ್ಯ ವಾಗುತದೆ ನನ್ನೊಂದಿಗೆ ಕಳೆದ 6 ವರ್ಷಗಳಿಂದ ಪದಾದಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ವರು ದುಡಿದ್ದಾರೆ.ಮುಂದಿನ ದಿನಗಳಲ್ಲಿ ಮತಷ್ಟು ಸಮಾಜಪರ ಯೋಜನೆಗಳಿಗೆ ಕಟಿಬದ್ಧರಾಗಿದ್ದೇವೆ" ಎಂದರು.
ರಾತ್ರಿಯ ಅನ್ನ ಸಂತರ್ಪಣೆಯ ಪ್ರಯೋಜಕರಾದ ಮನೋಜ್ ಬಂಗೇರ ದಂಪತಿಯನ್ನು ಸತ್ಕರಿಸಲಾಯ್ತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಕೋಶಾಧಿಕಾರಿ ಹೇಮಂತ್ ಸಫಲಿಗ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಶೋಭಾ ಬಂಗೇರ ನಿರೂಪಿಸಿ, ವಂದಿಸಿದರು.
ಮಹಾಸಭೆಯ ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment