ತುಳು ಸಂಘ ಬೊರಿವಲಿ, 13ನೇ ವಾರ್ಷಿಕ ಮಹಾಸಭೆ
ತುಳು ಸಂಘ ಬೊರಿವಲಿ, 13ನೇ ವಾರ್ಷಿಕ ಮಹಾಸಭೆ
ಯುವ ಜನಾಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ನೀಡೋಣ - ಕರುಣಾಕರ ಎಂ. ಶೆಟ್ಟಿ
ಮುಂಬಯಿ : ಬೋರಿವಲಿ ಮತ್ತು ಪರಿಸರದಲ್ಲಿ ನೆಲೆಸಿದ ತುಳು, ಕನ್ನಡಿಗರನ್ನು ಒಂದೆಡೆ ಸೇರಿಸಿ, ತುಳು ಬಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕಳೆದ 13 ವರ್ಷಗಳಿಂದ ನಮ್ಮ ಸಂಘವು ಹಲವಾರು ಯೋಜನೆಯನ್ನು ಕೈಗೊಂಡು ಕಾರ್ಯರೂಪಕ್ಕೆ ತರುದರಲ್ಲಿ ಯಶಸ್ಸಿಯಾಗಿದ್ದು ಯುವ ಜನಾಂಗ ವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘಕ್ಕೆ ಸೇರಿಸಿ ಅವರನ್ನು ಸಂಘದಲ್ಲಿ ಕ್ರೀಯಾಶೀಲರನ್ನಾಗಿ ಮಾಡಬೇಕಾಗಿದೆ ಎಂದು ತುಳು ಸಂಘ ಬೊರಿವಲಿಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ನುಡಿದರು.
ತುಳು ಸಂಘ ಬೊರಿವಲಿಯ 13ನೇ ವಾರ್ಷಿಕ ಮಹಾಸಭೆಯು ಸೆ. 25 ರಂದು ಯೋಗಿ ನಗರ ಹೌಸಿಂಗ್ ಸೊಸೈಟಿ ಹಾಲ್, ಯೋಗಿ ನಗರ ಬೊರಿವಲಿ (ಪ.) ಇಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರುಣಾಕರ ಎಂ. ಶೆಟ್ಟಿಯವರು ಮಹಾಸಭೆಗೆ ಸದಸ್ಯರೆಲ್ಲರ ಸಹಕಾರದಿಂದ ಸಂಘದ ಮಹಿಳಾ ವಿಭಾಗ ಹಾಗೂ ಸಾಂಸ್ಕತಿಕ ವಲ್ಲಿ ವಿಭಾಗವು ವರದಿ ವರ್ಷದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರನ್ನು ಅಭಿನಂದಿಸಬೇಕಾಗಿದೆ. ಇದೇ ರೀತಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಹಿರಿಕಿರಿಯರಿಂದ ಸಂಘವು ಇನ್ನಷ್ಟು ಬಲಿಷ್ಟಗೊಳ್ಳಲಿ ಎನ್ನುತ್ತಾ ಸಂಘದ ಮುಂದಿನ ಎಲ್ಲ ಯೋಜನೆಗಳಿಗೆ ಶುಭ ಹಾರೈಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ವಾರ್ಷಿಕ ಲೆಕ್ಕ ಪತ್ರದ ಬಗ್ಗೆ ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ ಮಾಹಿತಿಯಿತ್ತರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಹರೀಶ್ ಜಿ. ಮೈಂದನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ, ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ, ಕುಸುಮ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ, ಸಂಘದ ಸ್ಥಾಪಕ ಅಧ್ಯಕ್ಷ, ವಾಸು ಪುತ್ರನ್, ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪೇಟೆಮನೆ, ಹಿರಿಯ ಸದಸ್ಯರಾದ ಹರೀಶ್ ಪೂಜಾರಿ ಕೊಕ್ಕರ್ಣೆ ಮೊದಲಾದವರು ಮಾತನಾಡಿ ಸಂಘದ ಅಭಿವೃದ್ದಿಯ ಬಗ್ಗೆ ಉತ್ತಮ ಸಲಹೆ ಸೂಚನೆಗಳನ್ನಿತ್ತರು.
ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ ಅವರು ಕೊನೆಗೆ ವಂದನಾರ್ಪಣೆಗೈದರು.

Post a Comment