ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 23ನೇ ವಾರ್ಷಿಕ ಮಹಾಸಭೆ,
ಅವಿಭಾಜಿತ ಜಿಲ್ಲೆಯಲ್ಲಿ ಸಮಿತಿ ಪ್ರಾರಂಭಿಸುವ ಮೂಲಕ ಸಮಿತಿಯ ಕಾರ್ಯಚಟುವಟಿಗೆಗಳಿಗೆ ಹೆಚ್ಚಿನ ಬಲ ಸಿಗುವಂತಾಗಿದೆ - ತೋನ್ಸೆ ಜಯಕೃಷ್ಣ ಎ. ಶೆಟ್ಟಿ
ಚಿತ್ರ ವರದಿ : ದಿನೇಶ್ ಕುಲಾಲ್
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖ್ಯಾತ ಸಂಘಟಕ ಡಿ. ಆರ್. ರಾಜು ಅವರ ನೇತೃತ್ವದಲ್ಲಿ ಜಿಲ್ಲೆಗಳ ನೂತನ ಸಮಿತಿಯ ನ್ನು ಸ್ಥಾಪಿಸಲು ಇಂದಿನ ಮಹಾಸಭೆಯು ಅನುಮತಿಯನ್ನು ನೀಡಿದ್ದು ಕೆಲವೇ ದಿನಗಳಲ್ಲಿ ನಾವು ಕೆಲವರು ಜಿಲ್ಲೆಗೆ ಬೇಟಿಯಿತ್ತು ಸಮಿತಿಯನ್ನು ಸ್ಥಾಪಿಸಿ ಮುಂದಿನ ಕಾರ್ಯದ ಬಗ್ಗೆ ಚರ್ಚಿಸಲಿರುವೆವು. ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಸಮಾವೇಶ ಕಾರ್ಯಕ್ರಮದಲ್ಲಿ ಜಿಲ್ಲೆಗಳ ಅಭಿವೃದ್ದಿಯ ಮುಂದಿನ ಕರಡು ಯೋಜನೆಯ 125 ಪುಟಗಳ ವರದಿಯನ್ನು ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಇವರ ಮುಖಾಂತರ ಸರಕಾರಕ್ಕೆ ನೀಡಿದ್ದು. ಅಲ್ಲದೆ ಮಂಗಳೂರಿನ ಸೋಮೇಶ್ವರದ ಕಡಲ ತೀರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಪರಿಸರ ಪ್ರೇಮಿಯ ಹೆಸರಲ್ಲಿ ಮಾಡುತ್ತೇವೆ ವೆಂದು ಶ್ರೀನಿವಾಸ್ ಸಾಪಲ್ಯರ ಬೇಡಿಕೆ . ಮತ್ತಿತರ ಮಹತ್ವದ ಬೇಡಿಕೆಗಳನ್ನು ಮಾನ್ಯ ಸ್ಪೀಕರ್ ಯು.ಟಿ. ಖಾದರ್ ನೀಡಿದ್ದೇವೆ. ಇದಕ್ಕೆ ಸರಕಾರದ ಕೂಡಲೇ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ . ಸಮಿತಿಯ ಪ್ರವಾಸೋಧ್ಯಮ ಅಭಿವೃದ್ದಿಯ ಬಗ್ಗೆ ಉನ್ನತ ಮಟ್ಟದ ಜನರನ್ನು ಸಂಪರ್ಕಿಸಿದ್ದು ಸರಕಾರವು ಈಗಾಗಲೇ ಈ ಬಗ್ಗೆ ಕ್ರೀಯಾಶೀಲವಾಗಿದೆ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಿತಿಗೆ ಬಹಳಷ್ಟು ಪ್ರೋತ್ಸಾಹ ಲಭಿಸುತ್ತಿದೆ. ಮುಂಬಯಿಯ ಎಲ್ಲಾ ಜಾತೀಯ ಸಂಘಟನೆಗಳ ಮುಖಂಡರು ಮಾತ್ರವಲ್ಲದೆ ಇಲ್ಲಿನ ಇತರ ಪ್ರಮುಖ ಸಂಘಟನೆಗಳ ಪ್ರಮುಖರನ್ನು ಸೇರಿಸಿ ಮುಂಬಯಿ ಮಂಗಳೂರು ರೈಲು ಸಮಸ್ಯೆ ಬಗ್ಗೆ, ಶಾಸ್ವತ ತಡೆಗೋಡೆ, ಪ್ರವಾಸೋಧ್ಯಮ ಅಭಿವೃದ್ದಿ ಹಾಗೂ ಇತರ ಯೋಜನೆಗಳ ಬಗ್ಗೆ ಸರಿಯಾದ ಮಾರ್ಗದಲ್ಲಿ ಮುಂದುವರಿಯೋಣ ಎಂದು
ಕರ್ನಾಟಕ ಕರಾವಳಿಯ ಉಭಯ ಜಿಲ್ಲೆಗಳ ಅಭಿವೃದ್ದಿಗಾಗಿ ಕ್ರಿಯಾಶೀಲರಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 23ನೇ ವಾರ್ಷಿಕ ಮಹಾಸಭೆಯು ಸೆ. 18ರಂದು ಸಂಜೆ ಕುರ್ಲಾ ಪೂರ್ವ ಬಂಟರ ಸಂಘ ಮುಂಬಯಿಯ ಅನೆಕ್ಸ್ ಸಭಾಗೃ ಹದಲ್ಲಿ ಅಧ್ಯಕ್ಷರಾದ ಎಲ್. ವಿ. ಅಮೀನ್ ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ಮಾತನಾಡುತ್ತಾ ನುಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಲ್. ವಿ. ಅಮೀನ್ ಅವರು ಕರ್ನಾಟಕ ಕರಾವಳಿ ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 23 ವರ್ಷಗಳಿಂದ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯು ಪ್ರತೀ ವರ್ಷ ಕೈಗೊಂಡಂತಹ ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ಸಿಯಾಗಿದೆ. ನಾವು ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೊದಲು ಈಗ ಕೈಗೊಂಡತಹ ಉಭಯ ಜಿಲ್ಲೆಗಳಲ್ಲಿ ಕೈಗಾರೀಕರಣ, ಸಮುದ್ರ ತೀರದಲ್ಲಿ ತಡೆಗೋಡೆ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಶೀಘ್ರದಲ್ಲೆಯೇ ಕಾರ್ಯರೂಪಕ್ಕೆ ತರುದರೊಂದಿಗೆ ಇತರ ಯೋಜನೆಗಳ ಬಗ್ಗೆ ಕ್ರೀಯಾಶೀಲರಾಗೋಣ.
ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಕಾರ್ಯಕ್ರಮವು ಸಮಿತಿಯ ಸದಸ್ಯರ ಶಿಸ್ತುಭದ್ದವಾದ ಪೂರ್ವ ಸಿದ್ದತೆಯೊಂದಿಗೆ ಯಶಸ್ವಿಯಾಗಿ ಜರಗಿದ್ದು ನಮ್ಮ ಜಿಲ್ಲೆಗಳ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳೆಯುವಲ್ಲಿ ನಾವು ಯಶಸ್ಸಿಯಾಗಿದ್ದು ಇದಕ್ಕೆ ದುಡಿದ ಎಲ್ಲರನ್ನೂ ಅಭಿನಂದಿಸಬೇಕಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿಯ ಸದಸ್ಯರು ಜಿಲ್ಲೆಗಳ ಅಭಿವೃದ್ದಿ ಬಗ್ಗೆ ಹಾಗೂ ಸಮಿತಿಯ ಮುಂದಿನ ಕಾರ್ಯದ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದು ನಾವೆಲ್ಲರೂ ಸೇರಿ ಜಿಲ್ಲೆಗಳ ಅಭಿವೃದ್ದಿಗಾಗಿ ಹಂತ ಹಂತವಾಗಿ ದುಡಿಯೋಣ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರನ್ನು ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್ ಸ್ವಾಗತಿಸಿದರು. ಗತಸಭೆಯ ವರದಿ ಹಾಗೂ ವಾರ್ಷಿಕ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಸಭೆಯಲ್ಲಿ ಮುಂಡ್ಕೂರು ಮಂಡಿಸಿದರು.
ಸಭೆಯಲ್ಲಿ ಸಮಿತಿಯ ವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಸಮಿತಿ ಸ್ಥಾಪಿಸಲು ಮಂಜೂರು ಮಾಡಲಾಯಿತು.
ಜಿಲ್ಲೆಗಳಲ್ಲಿ ಜನಪ್ರಿಯರಾಗಿರುವ ಖ್ಯಾತ ಸಂಘಟಕ ಡಿ. ಆರ್. ರಾಜು ಅವರನ್ನು ಜಿಲ್ಲೆಗಳ ನೂತನ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಸಮಿತಿಯನ್ನು ಸ್ಥಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಉಡುಪಿ ಜಿಲ್ಲೆಯ ಉಳೆಪಾಡಿ ಮತ್ತು ಕೊಲ್ಲೂರು ಬಳ್ಕುಂಜೆಯಲ್ಲಿ 1097 ಎಕರೆ ಭೂ ಕೈಗಾರಿಕೀಕರಣದ ಯೋಜನೆ ಬಗ್ಗೆ ಸೂಕ್ತ ಚರ್ಚೆಯು ನಡೆಯಿತು.
ಎರಡೂ ಜಿಲ್ಲೆಗಳಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ, ಜಿಲ್ಲೆ / ಪುರಸಭೆ / ಪಂಚಾಯತ್ ಮಟ್ಟದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸ್ಮಶಾನಗಳ (ವಿದ್ಯುತ್ ಅಥವಾ ಅನಿಲ ಆಧಾರಿತ) ನಿರ್ಮಾಣ ದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಚರ್ಚಿಸುವ ಬಗ್ಗೆ ಮಣಿಪಾಲದಲ್ಲಿ ನಡೆದ ಸಮ್ಮೇಳನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭಿಕರ ಬಾಷಣದಲ್ಲಿ ಸಮಿತಿಯ ಮಾಜಿ ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ, ಉಪಾಧ್ಯಕ್ಷರುಗಳಾದ ಪಿ ಧನಂಜಯ್ ಶೆಟ್ಟಿ, ಹಿರಿಯಡ್ಕ ಮೋಹನ್ ದಾಸ್ . ನ್ಯಾಯವಾದಿ ಆರ್ ಎಂ ಭಂಡಾರಿ . ನಿ ತ್ಯಾನಂದ ಕೋಟ್ಯಾನ್, ಸಿಎಸ್. ಗಣೇಶ್ ಶೆಟ್ಟಿ, ನ್ಯಾ. ಶಶಿಧರ ಕಾಪು, ಶ್ರೀನಿವಾಸ ಸಾಫಲ್ಯ, ಡಾ. ಅರ್. ಕೆ ಶೆಟ್ಟಿ, ಹಿರಿಯಡ್ಕ ಮೋಹನ್ ದಾಸ್, ದಯಾಸಾಗರ ಚೌಟ ಮಾತನಾಡುತ್ತ ಲೆಕ್ಕ ಪತ್ರಗಳ ಬಗ್ಗೆ ಉತ್ತಮ ಸಲಹೆ ಸೂಚನೆಗಲನ್ನಿತ್ತರು .ಮಾತ್ರವಲ್ಲದೆ ಮುಂಬಯಿ ಮಂಗಳೂರು ರೈಲು ಪ್ರಯಾಣಿಕರು ಹೆಚ್ಚಿನ ಸಮಯ ಟಿಕೇಟು ದೊರಕದೆ ತೊಂದರೆಗೀಡಾಗುತ್ತಿದ್ದು ಮುಂಬಯಿ - ಮಂಗಳೂರು - ಮುಂಬಯಿ ರೈಲಿನ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಮಾತ್ರವಲ್ಲದೆ ಮುಂಬಯಿ ಮಂಗಳೂರು ವಿಮಾನ ಪ್ರಯಾಣ ದರವನ್ನು ವಿಪರೀತವಾಗಿ ಹೆಚ್ಚಿಸಲಾಗಿದ್ದು ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದರಲ್ಲದೆ ಸಮಿತಿಯ ಮುಂದಿನ ಯೋಜನೆ ಬಗ್ಗೆ ಉಪಯುಕ್ತ ಮಾಹಿತಿಯಿತ್ತರು.
ವೇದಿಕೆಯಲ್ಲಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್, ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಆರ್. ಕೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಮುಂಡ್ಕೂರು, ಗೌರವ ಕೋಶಾಧಿಕಾರಿ ತುಳಸಿದಾಸ್ ಅಮೀನ್ ಉಪಸ್ಥಿತರಿದ್ದರು. . ಸುರೇಂದ್ರ ಸಾಲ್ಯಾನ್ ಮುಂಡ್ಕೂರು ಧನ್ಯವಾದ ನೀಡಿದರು
ಸಭೆಯಲ್ಲಿ ಉಪಸ್ಥಿತರಿದ್ದ ಬಂಟ್ಸ್ ಸಂಘ ಮುಂಬೈಯ ಡಾ. ಪ್ರಭಾಕರ್ ಶೆಟ್ಟಿ ಬೋಳ , ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ರವಿ ದೇವಾಡಿಗ . ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಪದ್ಮಶಾಲಿ ಸೇವಾ ಸಂಘ ಮುಂಬೈಅಧ್ಯಕ್ಷ ಉತ್ತಮ ಶೆಟ್ಟಿಗಾರ, ಗಾಣಿಗ ಸಂಘ ಮುಂಬೈ, ಗೌರವ ಅಧ್ಯಕ್ಷ ರಾಮಚಂದ್ರ ಗಾಣಿಗ . ಬಂಡಾರಿ ಸೇವಾ ಸಂಘ ಮುಂಬೈ ಮಾಜಿ ಅಧ್ಯಕ್ಷ ನ್ಯಾ. ಆರ್‌ಎಂ ಭಂಡಾರಿ, ಕನ್ನಡ ಕಲಾವಿದರ ಪರಿಷತ್ ಮಹಾರಾಷ್ಟ್ರ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಳ್ಚಡ, . ಭಂಡಾರಿ ಸೇವಾ ಸಂಘದ ರಾಕೇಶ್ ಭಂಡಾರಿ , ದೇವಾಡಿಗ ಸಂಘದ ಮಹಿಳಾ ಪದಾಧಿಕಾರಿಗಳು ತೀಯಾ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಜಿಟಿ ಆಚಾರ್ಯ, ಕುಲಾಲ ಸಂಘ ಮುಂಬೈಯ ಮಾಜಿ ಅಧ್ಯಕ್ಷ ಗಿರೀಶ್ ಸಾಲಿಯಾನ್. ವಿದ್ಯಾದಾಯಿನಿ ಸಭಾ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಪು ಕೆ ಎಂ ಕೋಟ್ಯಾನ್ . ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಜೊತೆ ಕಾರ್ಯದರ್ಶಿ ಹ್ಯಾರಿ ಸಿಕ್ಕೇರ . ಜೊತೆ ಕೋಶಧಿಕಾರಿ ಸಂಜೀವ ಪೂಜಾರಿ ತೋನ್ಸೆ , ಬಂಟ್ಸ್ ಫೋರಂ ಮೀರಾ -ಭಯಂದರ್ ನ ಗೌರವ ಅಧ್ಯಕ್ಷ ಬೆಳ್ಳಿ ಪಾಡಿ ಸಂತೋಷ ರೈ. ಮಾತೃಭೂಮಿ ಸಹಕಾರಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನಿರ್ದೇಶಕರ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್ , ಮತ್ತಿತರಜಾತೀಯ ಸಂಘ ಸಂಸ್ಥೆಗಳ, ತುಳು ಕನ್ನಡ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment