ಶ್ರೀ ಸಾಯಿಬಾಬಾ ಪೂಜಾ ಸಮಿತಿ, ಕಾಲಘೋಡಾದ ವಾರ್ಷಿಕ ಮಹಾಸಭೆ, ಹೊಲಿಗೆ ಸ್ಪರ್ಧೆಯ ಬಹುಮಾನ ವಿತರಣೆ.
ಸಮಾಜ ಸೇವೆಯೊಂದಿಗೆ ನೂತನ ಸಾಯಿಮಂದಿರದ ಸ್ಥಾಪನೆ ಅಗತ್ಯ... : ಪ್ರದೀಪ್ ಶೆಟ್ಟಿ.
ಚಿತ್ರ, ವರದಿ: ಉಮೇಶ್ ಕೆ.ಅಂಚನ್
ಮುಂಬಯಿ, ಸೆ.20. ಕಳೆದ ಐದು ದಶಕಗಳಿಂದ ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯು ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವೆಯನ್ನು ಮಾಡುತ್ತಿದೆ. ಕಾಲಘೋಡಾದಲ್ಲಿದ್ದ ಸಾಯಿಮಂದಿರವನ್ನು ಮಹಾನಗರಪಾಲಿಕೆಯು ಕೆಡವಿದ ಕಾರಣ ಸಮಿತಿಗೆ ಮಂದಿರ ನಿರ್ಮಾಣ ಮಾಡುವ ಅಗತ್ಯ ಇದೆ .ಸಾಯಿಭಕ್ತರ ಸಹಕಾರದಿಂದ ಆದಷ್ಟು ಬೇಗ ನೂತನ ಮಂದಿರದ ನಿರ್ಮಾಣವಾಗಲಿ ಎಂದು ಬೊರಿವಿಲಿ ಮಹಿಷಾಮರ್ದಿನಿ ದೇವಸ್ಥಾನದ ಆಡಳಿತ ಟ್ರಸ್ಟಿ ಕಣಂಜಾರು ಪ್ರದೀಪ್ ಶೆಟ್ಟಿ ಹೇಳಿದರು.
ಅವರು ಕಾಲಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿಯು ರವಿವಾರ ಸೆ.17 ರಂದು ಬೊರಿವಿಲಿ ಪಶ್ಚಿಮದ ಪದ್ಮನಗರ ಚುಕುವಾಡಿಯ ಭೂಷಣ್ ಪಾರ್ಕ್ ವಸತಿ ಸಂಕೀರ್ಣಲ್ಲಿರುವ ಸಮಿತಿಯ ಕಚೇರಿಯಲ್ಲಿ ಆಯೋಜಿಸಿರುವ ಹೊಲಿಗೆ ಸ್ಪರ್ಧೆಯ ಬಹುಮಾನ ಹಾಗೂ ಪ್ರತೀ ವರ್ಷ ಹೊಲಿಗೆ ತರಬೇತಿ ಪಡೆದ ಮಹಿಳೆಯೋರ್ವಳಿಗೆ ಕೊಡಮಾಡುವ ಹೊಲಿಗೆಯಂತ್ರ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಹೊಲಿಗೆಯಂತ್ರವನ್ನು ಲಕ್ಷ್ಮೀ ದೇವೇಂದ್ರ ಮಾಲ್ಗೀ ಹಾಗೂ ಸುವರ್ಣ ಮಹೋತ್ಸವದ ಅಂಗವಾಗಿ ಉಚಿತ ಹೊಲಿಗೆ ತರಗತಿಯಲ್ಲಿ ಏರ್ಪಡಿಸಿದ್ದ ಹೊಲಿಗೆ ಸ್ಪರ್ಧೆಯಲ್ಲಿ ಸುರೇಖಾ ವಸುದೇವ ಮಾನಗೆ,ಶಬನಾ ಶೇಖ್ ಹಾಗೂ ಕನ್ಯಾ ಚೌಧರಿ ಯವರು ಕ್ರಮವಾಗಿ ಪ್ರಥಮ ,ದ್ವಿತೀಯ, ತೃತೀಯ ಬಹುಮಾನ ಸ್ವೀಕರಿಸಿದರು.
ಸಮಿತಿಯ ಕಾರ್ಯದರ್ಶಿ ಫ್ರೊ.ಕೆ.ಎಚ್.ಕರ್ಕೇರ ಪ್ರಾಸ್ತಾವಿಕವಾಗಿ ಸಮಿತಿಯ ಬಗ್ಗೆ ಮಾತನಾಡಿದರು. ಅದ್ಯಕ್ಷ ಮಾಧವ ಎಸ್. ಶೆಟ್ಟಿ ಅತಿಥಿಗಳನ್ನು ಸತ್ಕರಿಸಿದರು. ಕೋಶಾಧಿಕಾರಿ ರವೀಂದ್ರ ಡಿ.ಶೇಣವ ವಂದಿಸಿದರು.
ಸಮಿತಿಯ ಉಪಾಧ್ಯಕ್ಷ ಜಯ ಎಸ್. ಶೆಟ್ಟಿ,ಜತೆಕಾರ್ಯದರ್ಶಿ ರಮೇಶ್ ಬಿ.ಶೆಟ್ಟಿ, ಜತೆ ಕೋಶಾಧಿಕಾರಿ ಭಾಸ್ಕರ್ ಎಮ್. ಶೆಟ್ಟಿ ,ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಜಿ. ಭಂಡಾರಿ,ಸುಧಾಕರ್ ಎಮ್. ಶೆಟ್ಟಿ, ರಮೇಶ್ ಪೂಜಾರಿ ,ರವಿ ಎಸ್. ಶೆಟ್ಟಿ,ಪ್ರದೀಪ್ ಸುವರ್ಣ,ಪರೀಕ್ಷಿತ್ ಎನ್. ರೈ ಹಾಗೂ ರವಿ.ಎಮ್ .ಶೆಟ್ಟಿ, ಪ್ರಸಾದ್ ಶೆಟ್ಟಿ, ಕೃಷ್ಣ ದೇವಾಡಿಗ, ಸಮಿತಿಯ ಸದಸ್ಯರು, ಹೊಲಿಗೆ ತರಬೇತಿ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ಸಮಿತಿಯ 29ನೇ ವಾರ್ಷಿಕ ಮಹಾಸಭೆಯು ಅದ್ಯಕ್ಷರಾದ ಮಾಧವ ಎಸ್. ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಫ್ರೋ.ಕೆ.ಎಚ್. ಕರ್ಕೇರ ವಾರ್ಷಿಕ ವರದಿ ಓದಿದರು. ಕೋಶಾಧಿಕಾರಿ ಆರ್. ಡಿ.ಶೇಣವ ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿಸರ್ವಾನುಮತದಿಂದ ಅಂಗೀಕರಿಸಲಾಯಿತು.ಮುಂದಿನ ವರ್ಷಕ್ಕೆ ಕೃಷ್ಣ ನಾಯಕ್ ಎಂಡ್ ಕಂಪನಿಯವರನ್ನು ಲೆಕ್ಕಪರಿಶೋಧಕರನ್ನಾಗಿ ನೇಮಿಸಲಾಯಿತು ಹಾಗೂ 2023 ರಿಂದ 2028ರ ಅವಧಿಗೆ ಸಮಿತಿಯ ಟ್ರಸ್ಟಿಗಳನ್ನಾಗಿ ಫ್ರೊ.ಕೆ.ಎಚ್. ಕರ್ಕೇರ, ರವೀಂದ್ರ ಡಿ.ಶೇಣವ, ಜಯ ಎಸ್ ಶೆಟ್ಟಿ ,ರವೀಂದ್ರ ಎಮ್. ಶೆಟ್ಟಿ ಹಾಗೂ ಸುಧಾಕರ.ಎಮ್.ಶೆಟ್ಟಿ ಯವರನ್ನು ಆರಿಸಲಾಯಿತು.
ಸಮಿತಿಯ ಅದ್ಯಕ್ಷ ಮಾಧವ ಎಸ್.ಶೆಟ್ಟಿಯವರು ಸಮಿತಿಯ ಪ್ರಗತಿ ಹಾಗೂ ಸರ್ವ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿವ ಸದಸ್ಯರನ್ನು ಅಭಿನಂದಿಸಿ ಮುಂದಿಗೂ ಇದೇ ರೀತಿಯಲ್ಲಿ ಸಹಕರಿಸಬೇಕೆಂದು ವಿನಂತಿಸಿದರು.
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment