ಖ್ಯಾತ ಉರಗ ತಜ್ಞರು, ಸಾಹಿತಿಗಳು ಆದ ಶ್ರೀಯುತ ಗುರುರಾಜ ಸನಿಲ್ ಉಡುಪಿ ಅವರ ವಿವಶ ಕಾದಂಬರಿ ಶೀಘ್ರದಲ್ಲೇ ಮುಂಬೈ ನ್ಯೂಸ್ ಕನ್ನಡ ದಲ್ಲಿ ಧಾರವಾಹಿಯಾಗಿ ನಿಮ್ಮ ಮುಂದೆ -



ಖ್ಯಾತ ಉರಗ ತಜ್ಞರು, ಸಾಹಿತಿಗಳು ಆದ ಶ್ರೀಯುತ ಗುರುರಾಜ ಸನಿಲ್  ಉಡುಪಿ ಅವರ  ವಿವಶ ಕಾದಂಬರಿ ಶೀಘ್ರದಲ್ಲೇ ಮುಂಬೈ ನ್ಯೂಸ್ ಕನ್ನಡ ದಲ್ಲಿ ಧಾರವಾಹಿಯಾಗಿ ನಿಮ್ಮ ಮುಂದೆ - 

" ವಿವಶ " ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ, ತುಳುನಾಡಿನ ಕುಗ್ರಾಮವೊಂದರಲ್ಲಿ ತಳಮಟ್ಟದ ಬಡ ಕುಟುಂಬಗಳಲ್ಲಿ ನಡೆದ ನೈಜ ಕಥಾ ಹಂದರ. 

ರೋಚಕ, ಬೀಭತ್ಸ, ಪ್ರಣಯ, ಕಾಮ, ಕ್ರೌರ್ಯ, ಕರುಣಾರಸಗಳನ್ನೊಳಗೊಂಡ ಈ ಧಾರವಾಹಿ ಮನೋಜ್ಞವಾಗಿ ಚಿತ್ರಿತವಾಗುತ್ತ, 'ಇಂಥ ಜೀವನವನ್ನೂ ಬದುಕಿದವರುಂಟೇ!?' ಎಂದು  ಓದುಗರ ಹುಬ್ಬೇರಿಸಿ ಬೆಚ್ಚಿಬೀಳಿಸುವ ಸನ್ನಿವೇಶಗಳು ಕಥೆಯುದ್ದಕ್ಕೂ ಅನಾವರಣಗೊಳ್ಳುತ್ತವೆ.

"ದೇವರು ಯಾಕೋ ಹುಟ್ಟಿಸಿದ್ದಾನೆ. ಹುಟ್ಟಿದ ಮೇಲೆ ಬದುಕಬೇಕು. ಅದಕ್ಕಾಗಿ ನಮಗೆ ತೋಚಿದಂತೆ ಬದುಕುತ್ತೇವೆ. ಅದನ್ನು ಬಿಟ್ಟು ಬೇರೇನೂ ವಿಶೇಷವಿಲ್ಲ. ಇದ್ದರೂ ನಮ್ಮಂಥವರಿಗದು ಅನ್ವಯಿಸುವುದಿಲ್ಲ!" ಎಂಬಂಥ ಬದುಕು ಇಲ್ಲಿನ ಮುಖ್ಯ ಪಾತ್ರಗಳದ್ದು. 

ಸಹೃದಯೀ ಓದುಗರ ಪ್ರೀತಿ, ಪ್ರೋತ್ಸಾಹದೊಂದಿಗೆ, 'ವಿವಶ' ಧಾರವಾಹಿ ಶೀಘ್ರದಲ್ಲೇ ಪತ್ರಿಕಾ ಪುಟಗಳಿಗೆ ಮೆರುಗು ನೀಡಲಿದೆ.









No comments

Powered by Blogger.