ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ನ ಆಶ್ರಯದಲ್ಲಿ ಭಕ್ತಿ, ಸಡಗರದಿಂದ ಜರಗಿದ ಶ್ರೀ ವಿಶ್ವಕರ್ಮ ಉತ್ಸವ.
ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ನ ಆಶ್ರಯದಲ್ಲಿ ಭಕ್ತಿ, ಸಡಗರದಿಂದ ಜರಗಿದ ಶ್ರೀ ವಿಶ್ವಕರ್ಮ ಉತ್ಸವ.
ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಕರ್ನಾಟಕ ವಿಶ್ವಕರ್ಮ ಎಸೋಸಿಯೇಷನ್ ವತಿಯಿಂದ ವಿಶ್ವಕರ್ಮ ಮಹೋತ್ಸವವನ್ನು ಸೆಪ್ಟಂಬರ್ 17ರಂದು ಮಲಾಡ್ ಪೂರ್ವದ ಶ್ರೀ ಸ್ವಾಮಿ ನಾರಾಯಣ ಮಂದಿರದ ಸಭಾ ಗ್ರಹದಲ್ಲಿ ವಿದ್ಯುಕ್ತವಾಗಿ ಭಕ್ತಿ, ಶ್ರದ್ದೆಯೊಂದಿಗೆ ಆಚರಿಸಲಾಯಿತು .
ವಿಶ್ವಕರ್ಮ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಸ್ವಾಮಿ ನಾರಾಯಣ ಮಂದಿರದ ಮೊದಲ ಮಹಡಿಯಲ್ಲಿ ವಿಶ್ವಕರ್ಮ ಹೋಮ ಆರಂಭವಾಯಿತು .
ಸಂಘದ ಉಪಾಧ್ಯಕ್ಷರಾದ ರವೀಶ್ ಆಚಾರ್ಯ ದಂಪತಿ ಪೂಜಾ ಯಜಮಾನಿ಼ಕೆ ವಹಿಸಿದ್ದರು.
ಬ್ರಹ್ಮಶ್ರೀ ವೇದಮೂರ್ತಿ ಶಂಕರ್ ನಾಥ ಪುರೋಹಿತ್ ಗೋಪಾಲಕೃಷ್ಣ ಪುರೋಹಿತ್,ಪ್ರಸ್ಸನ್ನ ಪುರೋಹಿತ್ ,ಸಂತೋಷ್ ಪುರೋಹಿತ್ ,ಪ್ರಶಾಂತ್ ಪುರೋಹಿತ್ ಅವರ ಪೌರೋಹಿತ್ಯದಲ್ಲಿ ಹೋಮ ನಡೆಯಿತು.ಚೇತನ್ ಪುರೋಹಿತ್, ದಾಮೋದರ್ ಆಚಾರ್ಯ ಸಹಕರಿಸಿದರು.
ಶ್ರೀ ವಿಶ್ವಕರ್ಮ ಹೋಮದ ಪೂರ್ಣಹುತಿಯಾದ ಬಳಿಕ ಶ್ರೀ ಸ್ವಾಮಿ ನಾರಾಯಣ ಮಂದಿರದ ನಾಲ್ಕನೇ ಮಹಡಿಯಲ್ಲಿ ಅಶೋಕ್ ಕೊಡ್ಯಾಡ್ಕ ಅವರು ಸುಂದರವಾಗಿ ಶೃಂಗರಿಸಿದ ಮಂಟಪದಲ್ಲಿ ಶ್ರೀ ವಿಶ್ವಕರ್ಮ ಪೂಜೆ ಆರಂಭವಾಯಿತು.
ಮಹಾಪೂಜೆಯ ಬಳಿಕ ಭಕ್ತಾದಿಗಳು ಸೇವಾ ರೂಪದಲ್ಲಿ ಪೂಜೆ ಸಲ್ಲಿಸಿದರು.
ಈ ನಡುವೆ ಭಜನಾ ಮಹೋತ್ಸವ ಆರಂಭಗೊಂಡಿತು. ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ನ ಕಾರ್ಯಕಾರಿ ಸಮಿತಿ , ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮಹಿಳಾ ವಿಭಾಗ , ಶ್ರೀ ಲಲಿತಾಂ ಭಜನ ಮಂಡಳಿ ಬೋರಿವಿಲಿ , ಶ್ರೀ ವಿಶ್ವಕರ್ಮ ಕಾಳಿಕಾಂಬ ಭಜನವ್ರ0ದ ಮುಂಬೈ, ಶ್ರೀ ವಿಶ್ವಕರ್ಮ ಮಹಿಳಾ ಬಳಗ ದೊಂಬಿವಲಿ ಇದರ ಸದಸ್ಯರು ಭಜನಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಭಾಗಿಯಾದರು.
ಭೋಜನದ ಬಳಿಕ ಸಮಾಜದ ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ತದ ನಂತರ ಗಾಯಕ ಸುರೇಶ್ ಶೆಟ್ಟಿ ಪನ್ವೆಲ್ ತಂಡದವರು ಭಕ್ತಿ ಗೀತೆ ಪ್ರಸ್ತುತ ಪಡಿಸಿದರು.
ನಂತರ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.
ಉಪಾಧ್ಯಕ್ಷ ರವೀಶ್ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಡಾ.ಆಶಾ ವೆಂಕಟ್ರಮಣ ಆಚಾರ್ಯ, ಡಾ.ನಿಧಿ ಉಮೇಶ್ ಆಚಾರ್ಯ, ನ್ಯಾಯವಾದಿ ಮೀನಾಕ್ಷಿ ಪದ್ಮನಾಭ ಆಚಾರ್ಯ ಇವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಶ್ರೀ ಕಾಳಿಕಾ0ಬಾ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸತೀಶ್ ಆಚಾರ್ಯ, ಬ್ರಹ್ಮಾವರ ತಾಲೂಕು ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಪುನರ್ ನಿರ್ಮಾಣದ ಕುರಿತು ಚೇತನ್ ಪುರೋಹಿತ್ ವಿವರ ನೀಡಿದರು.
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶುಭಾ ಎಸ್.ಆಚಾರ್ಯ ಆವರು ಮಹಿಳಾ ವಿಭಾಗದ ಚಟುವಟಿಕೆ ಬಗ್ಗೆ, ಯುವ ವಿಭಾಗದ ಕಾರ್ಯಧ್ಯಕ್ಷ ರಾಜೇಶ್ ಎಸ್.ಆಚಾರ್ಯ ಯುವವಿಭಾಗದ ಬಗ್ಗೆ ಮಾಹಿತಿ ನೀಡಿದರು.
ಸಮಾಜದ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಸಂಸ್ಥೆಯ ಮಾಜಿ ಅಧ್ಯಕ್ಷ ,ಹಾಗೂ ಬಾಲಾಜಿ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಜಿ.ಟಿ.ಆಚಾರ್ಯ ಅವರು ಬಾಲಾಜಿ ಕ್ರೆಡಿಟ್ ಸೊಸೈಟಿಯಲ್ಲಿ ಸಮಾಜ ಬಾಂಧವರು ಆರ್ಥಿಕ ವ್ಯವಹಾರ ಮಾಡುವಂತೆ ಸಲಹೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಮಾಜಿ ಅಧ್ಯಕ್ಷ ಪಿ.ಜೆ.ಆಚಾರ್ಯ ಅವರ ಪ್ರಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು.
ಸದಾನಂದ ಆಚಾರ್ಯ ಅವರು ಸಮಾಜದ ಬಂಧುಗಳನ್ನುದೇಶಿಸಿ ಮಾತನಾದುತ್ತಾ "ನಮ್ಮ ಸಂಘಕ್ಕೆ ಒಂದು ಸಮುದಾಯ ಭವನದ ಅಗತ್ಯವಿದೆ, ಈ ಯೋಜನೆ ಸಾಕಾರಗೊಳ್ಳಲು ಕೇವಲ ಸಂಸ್ಥೆಯ ಪದಾಡಿಕಾರಿಗಳಲ್ಲದೆ ,ಎಲ್ಲರೂ ಜತೆ ಗೂಡಿ ಒಂದೇ ನಿರ್ಧಾರ,ಗುರಿಯನ್ನು ಇಟ್ಟು ಮುಂದುವರಿಯಬೇಕಿದೆ.ಇಂದಿನ ವಿಶ್ವಕರ್ಮ ಉತ್ಸವ ಅಭೂತಪೂರ್ವ ರೀತಿಯಲ್ಲಿ ,ನಡೆದಿದ್ದು ,ಸಹಕಾರ ನೀಡಿದ ಎಲ್ಲರಿಗೂ ಶ್ರೀ ವಿಶ್ವಕರ್ಮ ದೇವರು ಅನುಗ್ರಹಿಸಲಿ" ಎಂದರು.
ಕೋಶಾಗಿಕಾರಿ ಬಾಬುರಾಜ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಸಮಿತಿಯ ಸದಸ್ಯ ಗಣೇಶ್ ಕುಮಾರ್ ಕೆ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಕಾರ್ಯಧರ್ಶಿ ಪ್ರಸಾದ್ ಆಚಾರ್ಯ ವಂದಿಸಿದರು.
ಕೊನೆಯಲ್ಲಿ ಶ್ರೀ ವಿಶ್ವಕರ್ಮ ದೇವರಿಗೆ ಮಹಾ ಆರತಿ ಬೆಳಗಲಾಯಿತು.
ವಿಶ್ವಕರ್ಮ ಉತ್ಸವದಲ್ಲಿ ಸಂಘ-ಸಂಸ್ಥೆಗಳ ಪದಾಡಿಕಾರಿಗಳು, ರಾಜಕೀಯ, ಧಾರ್ಮಿಕ ಮುಂದಾಳುಗಳು ಆಗಮಿಸಿ, ಶ್ರೀ ದೇವರ ಪ್ತಸಾದ ಹಾಗೂ ಸಂಸ್ಥೆಯ ಗೌರವ ಸ್ವೀಕರಿಸಿದರು.
ದಿನವಿಡೀ ನಡೆದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವು ವ್ಯವಸ್ಥಿತವಾಗಿ ನಡೆಯುವಲ್ಲಿ ಆಡಳಿತ ಸಮಿತಿಯ ಪದಾಡಿಕಾರಿಗಳು, ಸದಸ್ಯರು, ವಿಶೇಷ
ಆಹ್ವಾನಿತರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದವರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಪದಾಧಿಕಾರಿಗಳು, ಸದಸ್ಯರು ವಿಶೇಷವಾಗಿ ಶ್ರಮಿಸಿದರು.
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment