ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ , ಉಡುಪಿಯಲ್ಲಿ ವಿಶೇಷ ಸಭೆ. ಜಿಲ್ಲಾಧ್ಯಕ್ಷರಾಗಿ ಸಂಘಟಕ ಡಿ. ಆರ್. ರಾಜು ಅವಿರೋಧ ಆಯ್ಕೆ.


ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ , ಉಡುಪಿಯಲ್ಲಿ ವಿಶೇಷ ಸಭೆ. ಜಿಲ್ಲಾಧ್ಯಕ್ಷರಾಗಿ ಸಂಘಟಕ ಡಿ. ಆರ್. ರಾಜು ಅವಿರೋಧ ಆಯ್ಕೆ.

ಎಲ್ಲರ ಸಹಕಾರದಿಂದ ನನ್ನ ಜವಾಬ್ದಾರಿ ನಿರ್ವಹಿಸುವೆ - ಡಿ. ಆರ್. ರಾಜು.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ 23 ವರ್ಷಗಳಿಂದ ಕಾರ್ಯವೆಸಗುತ್ತಿರುವ ಏಕೈಕ ಸರಕಾರೇತರ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ ಸೆ.22 ರಂದು ಉಡುಪಿ ಕಿದಿಯೂರು ಹೋಟೆಲಿನ ವಾಸುಕಿ ಶೇಷ ಶಯನ ಸಭಾಗ್ರಹದಲ್ಲಿ ನಡೆಯಿತು. 
ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು ಸಂಸ್ಥೆಯು ನಡೆದ ಬಂದು ಹಾದಿಯ ಬಗ್ಗೆ ವಿವರಿಸುತ್ತಾ,  ಎಜುಕೇಶನ್ ಹಬ್ ಖ್ಯಾತಿಯ ಉಭಯ ಜಿಲ್ಲೆಯ ಯುವ ಜನತೆ ಶಿಕ್ಷಣದ ಬಳಿಕ ನಿರುದ್ಯೋಗದ ಸಮಸ್ಯೆ ಬಗೆಹರಿಸಿ ಜಿಲ್ಲೆಯಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಿ ಯುವ ಜನತೆಗೆ ಉದ್ಯೋಗ ಒದಗಿಸುವ ಮಹತ್ತರ ಕಾರ್ಯವನ್ನು ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೇತೃತ್ವದಲ್ಲಿ ಕೈಗೊಳ್ಳಲಾಯಿತು.


ಉಡುಪಿ ಜಿಲ್ಲೆ ಎದುರಿಸುತ್ತಿರುವ ವಿದ್ಯುತ್ ಅಭಾವವನ್ನು ಮನಗಂಡು ಜಿಲ್ಲೆಯಲ್ಲಿಯೇ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಬೇಕು ಎಂದು ಹೋರಾಟವನ್ನು ಕೈಗೊಂಡು ಜಿಲ್ಲೆಯ ವಿದ್ಯುತ್ ಕೊರತೆಯನ್ನು ನೀಗಿಸುವ ದೂರದೃಷ್ಟಿ ಯೋಜನೆಯನ್ನು ಉಡುಪಿಗೆ ತರುವಲ್ಲಿ ಸಮಿತಿಯು ಹಲವಾರು ಪ್ರತಿರೋಧದ ನಡುವೆಯೂ ಯಶಸ್ವಿಯಾಯಿತು. ಜಯಕೃಷ್ಣ ಶೆಟ್ಟಿಯವರು ಸಮಿತಿಯ ಇಂತಹ ಹತ್ತು ಹಲವಾರು ಹೋರಾಟಗಳನ್ನು ಮೆಲುಕು ಹಾಕಿದರು. 



 ಸಭೆಯಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ  ಸಮಿತಿಗೆ ನೂತನ ಕಾರ್ಯಧ್ಯಕ್ಷರಾಗಿ, ಕಾರ್ಕಳದ ಪ್ರಸಿದ್ದ ಉದ್ಯಮಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಡಿ.ಆರ್. ರಾಜು ಅವರು  ಅವಿರೋಧವಾಗಿ ಆಯ್ಜೆಯಾದರು.




 ಜಿಲ್ಲಾ  ಕಾರ್ಯಧ್ಯಕ್ಷರಾಗಿ ಆಯ್ಕೆಯಾದ ಡಿ.ಆರ್. ರಾಜು ಅವರು ತನ್ನ ಅನಿಸಿಕೆ ತಿಳಿಸುತ್ತಾ "ಬಹಳ ವರ್ಷಗಳಿಂದ ಸಮಿತಿಯ ಚಟುವಟಿಕೆಗಳನ್ನು ಗಮನಿಸಿದ್ದೇನೆ. ಸಮಿತಿಯು ಉಭಯ ಜಿಲ್ಲೆಗಳ ಹಲವಾರು ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆಹರಿಸಿದ್ದು ಉಲ್ಲೇಖನಿಯ. ಪ್ರಸ್ತುತ ಕರಾವಳಿ ಕರ್ನಾಟಕವು ಕಡಲು ಕೊರೆತದ ಜ್ವಲಂತ ಸಮಸ್ಯೆಯನ್ನು ಎದುರಿಸುತ್ತಿದೆ. ಕಡಲು ಕೊರೆತ ತಡೆಯಲು ಸರ್ಕಾರ ಹಲವಾರು ಕ್ರಮ ಕೈಗೊಂಡರೂ ಕೊರೆತದ ಸಮಸ್ಯೆ ಪರಿಹಾರವಾಗದೆ ಕೈಗೊಂಡ ಯೋಜನೆಗಳೆಲ್ಲ ನೀರುಪಾಲಾಗಿವೆ. ಕಡಲು ಕೊರೆತದಿಂದಾಗಿ ಕರಾವಳಿಯ ಕಡಲ ತಟದ ಅಮೂಲ್ಯ ಭೂಮಿ, ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗುತ್ತಿದ್ದು ಈ ನಷ್ಟವನ್ನು ತಡೆಯಬೇಕಿದೆ.  ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸುವ ಯೋಜನೆಯನ್ನು ಸಮಿತಿಯ ಸರ್ವ ಸದಸ್ಯರ ಸಹಕಾರದಲ್ಲಿ ತಂತ್ರಜ್ನರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು.




 ಕರಾವಳಿಯ ಮತ್ತೊಂದು ಪ್ರಮುಖ ಸಮಸ್ಯೆಯಾದ ಮಳೆಗಾಲದಲ್ಲಿ ಹೊರಜಿಲ್ಲೆಗಳ ಸಂಪರ್ಕ ಕಡಿತದ ಸಮಸ್ಯೆಗೂ ಆಧುನಿಕ ಯೋಜನೆಯ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಕರಾವಳಿಯ ಜಿಲ್ಲೆಗಳನ್ನು ಹೊರಜಿಲ್ಲೆಗಳೊಂದಿಗೆ  ಸಂಪರ್ಕಿಸಲು ಪಶ್ಚಿಮಘಟ್ಟಗಳ ನಡುವಿನ ರಸ್ತೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಬೇಕಿದೆ. ಮಳೆಗಾಲದಲ್ಲಿ ಪಶ್ಚಿಮಘಟ್ಟದ ಘಾಟಿ ರಸ್ತೆಗಳಲ್ಲಿ ಸಂಪರ್ಕ ಕಡಿತಗೊಳ್ಳುವುದರಿಂದ ಜಿಲ್ಲೆಯ ಅಭಿವೃದ್ಧಿಗೆ, ಕೈಗಾರಿಕೆಗಳ ಚಟುವಟಿಕೆಗೆ ಸಮಸ್ಯೆ ಉಂಟಾಗುತ್ತಿದೆ, ಪಶ್ಚಿಮಘಟ್ಟಗಳ ರಸ್ತೆ ಸಮಸ್ಯೆಯು ಪರಿಹಾರವಾದರೆ ಜಿಲ್ಲೆಯು ಇನ್ನಷ್ಟು ಅಭಿವೃದ್ಧಿಯತ್ತ ದಾಪುಗಾಲು ಹಾಕಲಿದೆ . ಜಿಲ್ಲೆಯ ಯುವ ಜನತೆಗೆ ಉದ್ಯೋಗ ಒದಗಿಸಲು ವಿವಿಧ ಕೈಗಾರಿಕೆಗಳಿಗೆ ಬೇಡಿಕೆ, ಪರಿಸರವನ್ನು ಸಂರಕ್ಷಿಸುತ್ತಾ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಮುಂಬರುವ ದಿನಗಳಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಕೆಲಸ ಮಾಡಲಿದೆ ಎನ್ನುತ್ತಾ,  ತನ್ನ ಮೇಲೆ ಭರವಸೆ ಇಟ್ಟು ಅತ್ಯಂತ ದೊಡ್ಡ ಜವಾಬ್ದಾರಿಯನ್ನು ನನ್ನ ಹೆಗಲೇರಿಸಿದ್ದೀರಿ, ಎಲ್ಲರ  ಸಹಕಾರದಿಂದ ,ನನ್ನ ಜವಾಬ್ದಾರಿಯನ್ನು ನಿರ್ವಹಿಸುವೆ  ಎಂದರು.




ಸಬೆಯ ಅಧ್ಯಕ್ಧತೆ ವಹಿಸಿದ್ದ ಸಮಿತಿಯ ಅಧ್ಯಕ್ಷರಾದ ಎಲ್.ವಿ.ಅಮೀನ್ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ "ಜಿಲ್ಲೆಯಲ್ಲಿ ಸಮಿತಿಯ ಕಾರ್ಯಧ್ಯಕ್ಷರಾಗಿ ನಿಯುಕ್ತಿಗೊಂಡ ಡಿ.ಆರ್.ರಾಜು ಅವರು ಓರ್ವ ಕ್ರಿಯಾಶೀಲ ಸಂಘಟಕರಾಗಿದ್ದು, ಅವರ ಮುಂದಾಳತ್ವದಲ್ಲಿ ಸಮಿತಿಯ ಕಾರ್ಯ -ಚಟುವಟಿಕೆಗಳು ಮತ್ತಷ್ಟು ವಿಸ್ತಾರವಾಗಲಿದೆ.ಕರಾವಳಿಯಲ್ಲಿ ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ತಡೆಗೋಡೆ ನಿರ್ಮಿಸಲು ,ಸರಕಾರದ ಗಮನ ಸೆಳೆದಿದ್ಫು,  ಉಳೆಪಾಡಿ,ಬಳ್ಕುಂಜೆ 1097 ಎಕರೆ  ಭೂ ಪ್ರದೇಶದಲ್ಲಿ ಕೈಗಾರಿಕರಣ, ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಗಾರ, ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಸಮಿತಿಯು ಕಾರ್ಯಶೀಲವಾಗಿದೆ ಎಂದರು.



ಸಮಿತಿಯ  ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌರವ ಪ್ರದಾನ ಕಾರ್ಯದರ್ಶಿ, ಮುಂಡ್ಕೂರು ಸುರೇಂದ್ರ ಸಾಲಿಯಾನ್, ಮಾಜಿ ಅಧ್ಯಕ್ಷರುಗಳಾದ ಧರ್ಮಪಾಲ್ ದೇವಾಡಿಗ,  ಮತ್ತು ಹರೀಶ್ ಕುಮಾರ್ 
ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರೊ. ಶಂಕರ್, ಜೊತೆ ಕಾರ್ಯದರ್ಶಿಗಳಾದ  ಸುರೇಂದ್ರ ಮೆಂಡನ್ , ಶೇಖರ್ ಗುಜ್ಜೆರ್ ಬೆಟ್ಟು ವೇದಿಕೆಯೇಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿತ್ಯಾನಂದ ಕೋಟ್ಯಾನ್ ನಿರೂಪಿಸಿದರು.



ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್ ವಂದಿಸಿದರು.
ಜಿಲ್ಲಾ ಸಮಿತಿಯ ಸದಸ್ಯರು, ಸದಸ್ಯತನದ ಆಸಕ್ತರು ವಿಶೇಷ ಸಭೆಯಲ್ಲಿ ಉಪಸ್ಥಿತರಿದ್ದರು.

















No comments

Powered by Blogger.