ತಮ್ಮ ಮೈತ್ರಿಯ ಹಿತಾದ್ರಷ್ಟಿಯಿಂದ ಕನ್ನಡಿಗರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ : ಅಶ್ವತ್ಥ ನಾರಾಯಣ.




 ತಮ್ಮ ಮೈತ್ರಿಯ ಹಿತಾದ್ರಷ್ಟಿಯಿಂದ ಕನ್ನಡಿಗರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ : ಅಶ್ವತ್ಥ ನಾರಾಯಣ.


ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಸೆ.26 ರಂದು ನಡೆದ ಬೆಂಗಳೂರು ಬಂದ್ ಯಶಸ್ವಿಯಾಗಿದೆ. ಇದರ ಮದ್ಯ ತಮಿಳುನಾಡಿಗೆ ದಿನಂಪ್ರತಿ 3 ಸಾವಿರ ಕ್ಯೂಸೆಕ್ಸ್ ನೀರನ್ನು ಅ.15ರ ತನಕ ಬಿಡಬೇಕು ಎಂಬ ಆದೇಶವನ್ನು ಕಾವೇರಿ ನೀರು ನಿರ್ವಹಣಾ  ಪ್ರಾಧಿಕಾರ ಆದೇಶ ನೀಡಿದ್ದು, ಸೆ.29 ರಂದು ಕರ್ನಾಟಕ ಬಂದ್ ಗೆ ಕರೆನೀಡಲಾಗಿದೆ.

ಈ ನಡುವೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು "ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಹಿತ ಕಾಯಲು ಡಿಎಂಕೆ ಸರಕಾರಕ್ಕೆ ಕಾಂಗ್ರೆಸ್ ಸರಕಾರ ಸಹಕಾರ ನೀಡುತ್ತಿದ್ದು, ಕರ್ನಾಟಕದ ರೈತರು ಹಾಗೂ ಜನರ ಜೀವನದ ಜತೆ ಚೆಲ್ಲಾಟವಾಡುತಿದೆ, ತಮ್ಮ ಮೈತ್ರಿ ಕೂಟದ ಹಿತಕ್ಕಾಗಿ ಕರುನಾಡಿಗೆ ದ್ರೋಹಬಗೆಯುತಿರುವ ಸಿದ್ದಾರಾಮಯ್ಯ ಅವರ ದುರಾಡಿಳಿತಕ್ಕೆ ಜನರು ಬೀದಿಗಿಳಿದು ಪ್ರತಿಭಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಕಿಡಿಕಾರಿದ್ದಾರೆ.








No comments

Powered by Blogger.