ಬಿಲ್ಲವರ ಅಸೋಸಿಯೇಷನ್ ಭಾಯಂದರ್ ಸ್ಥಳೀಯ ಕಚೇರಿ : ವಿಜೃಂಭಣೆಯ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ.
(ಚಿತ್ರ ವರದಿ : ಉಮೇಶ್ ಕೆ.ಅಂಚನ್ )
ಮುಂಬಯಿ, ಸೆ.21. ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯು ಸೆ.17ರಂದು ಆದಿತ್ಯವಾರ ಭಾಯಂದರ್ ಪೂರ್ವ ರೈಲ್ವೇ ಸ್ಟೇಶನ್ ಸಮೀಪದ(ಜೆಸ್ಸಲ್ ಪಾರ್ಕ್) ಇಂದ್ರವರುಣ ಸಭಾಗೃಹದಲ್ಲಿ ವಿಜೃಂಭಣೆಯಿಂದ ಜರಗಿತು.
ಬಿಲ್ಲವರ ಅಸೋಸಿಯೇಷನ್ ಅದ್ಯಕ್ಷ ಹರೀಶ್ ಜಿ.ಅಮೀನ್, ಉಪಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ನರೇಶ್ ಕೆ.ಪೂಜಾರಿ, ಕಾರ್ಯದರ್ಶಿ ಮಾಲತಿ ಆರ್.ಬಂಗೇರ ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ ಗಂಟೆ 5ರಿಂದ ಸಮಿತಿಯ ಸದಸ್ಯರಿಂದ ಭಜನೆ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯ, ಸದಸ್ಯೆಯರಿಂದ ಕುಣಿತ ಭಜನೆ, ಓಂ ನಮೋ ನಾರಾಯಣಾಯ ನಮಃ ಶಿವಾಯ ಜಪ ನಡೆಯಿತು.ನಾರಾಯಣ ಗುರುಗಳ ಸಮಾಜದ ಮೇಲಿನ ತತ್ವ ಚಿಂತನೆಗಳ ಬಗ್ಗೆ ಹರಿದಾಸ ಎಸ್. ಧನಂಜಯ ಶಾಂತಿ ಮಾತನಾಡಿದರು. ಹರೀಶ್ ಶಾಂತಿಯವರಿಂದ ಗುರುಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು.ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂಧರ್ಭದಲ್ಲಿ ಬಿಲ್ಲವರ ಎಸೋಸಿಯೇಶನಿನ ಜತೆ ಕಾರ್ಯದರ್ಶಿ ಕೇಶವ ಕೆ.ಕೋಟ್ಯಾನ್,ಯುವ ವಿಭಾಗದ ಕಾರ್ಯಾದ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾದ್ಯಕ್ಷ ದಯಾನಂದ ಆರ್. ಪೂಜಾರಿ, ವಿದ್ಯಾ ಉಪಸಮಿತಿಯ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಕ್ಕರ್ಣೆ, ಸೇವಾದಳದ ಜಿಓಸಿ ಗಣೇಶ್ ಪೂಜಾರಿ,ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಮಾಜಿ ಅದ್ಯಕ್ಷ ಚಂದ್ರಶೇಖರ ಪೂಜಾರಿ,ಕೇಂದ್ರ ಕಚೇರಿಯ ಪ್ರತಿನಿಧಿ ರೋಹಿತ್ ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಗಂಗಾಧರ್ ಪೂಜಾರಿ ಮತ್ತು ಸೂರ್ಯಕಾಂತ್ ಜೆ.ಸುವರ್ಣ ,ಮಾಜಿ ಶಾಸಕ ನರೇಂದ್ರ ಎಲ್.ಮೆಹತಾ, ನಗರಸೇವಕ ಅರವಿಂದ್ ಎ.ಶೆಟ್ಟಿ, ನಗರಸೇವಕಿ ನೀಲಂ ದವನ್ ಹಾಗೂ ಪರಿಸರದ ಸಂಘಸಂಸ್ಥೆಗಳ ಪ್ರತಿನಿಧಿಗಳು, ಬಿಲ್ಲವರ ಎಸೋಸಿಯೇಶನಿನ ಇತರ ಸ್ಥಳೀಯ ಸಮಿತಿಗಳ ಪ್ರತಿನಿಧಿಗಳು ,ಗುರುಭಕ್ತರು ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿಯ ಉಪಾಧ್ಯಕ್ಷರುಗಳಾದ ಉದಯ ಡಿ.ಸುವರ್ಣ ಮತ್ತು ನ್ಯಾ.ರಘುನಾಥ್ ಜಿ.ಹಳೆಂಗಡಿ, ಜತೆ ಕಾರ್ಯದರ್ಶಿ ಗಣೇಶ್ ಅಂಚನ್, ಕೋಶಾಧಿಕಾರಿ ಕೃಷ್ಣ ಬಂಗೇರ, ಜತೆ ಕೋಶಾಧಿಕಾರಿ ದಯಾನಂದ ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ,ಯುವ ವಿಭಾಗ ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
ಪೂಜಾಮಂಟಪವನ್ನು ಎಮ್. ಡಿ.ಮೋಹನದಾಸ್ ಸಿಂಗರಿಸಿದ್ದರು.
ಸ್ಥಳೀಯ ಸಮಿತಿಯ ಕಾರ್ಯಾದ್ಯಕ್ಷ ನರೇಶ್ ಕೆ.ಪೂಜಾರಿ ಕಾರ್ಯಕ್ರಮದ ಯಶಸ್ಸಿ ಸಹಕರಿಸಿದ ಸರ್ವರನ್ನೂ ಅಭಿನಂದಿಸಿ ಅಭಾರ ಮನ್ನಿಸಿದರು.
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
Post a Comment